ಸಿನಿಮಾ ಲೋಕದಲ್ಲಿ ಸದ್ಯ ಕೇಳಿಬರುತ್ತಿರುವ ಅತಿ ದೊಡ್ಡ ಗಾಸಿಪ್ ಎಂದರೆ ಅದು ಮೃಣಾಲ್ ಠಾಕೂರ್ ಮತ್ತು ಕಾಲಿವುಡ್ ಸ್ಟಾರ್ ಧನುಷ್ ಅವರ ವಿವಾಹದ ಸುದ್ದಿ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡುತ್ತಿವೆ. ಈ ಎಲ್ಲಾ ಚರ್ಚೆಗಳ ನಡುವೆ ಮೃಣಾಲ್ ಠಾಕೂರ್ ಹಂಚಿಕೊಂಡಿರುವ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಅಭಿಮಾನಿಗಳ ಗಮನ ಸೆಳೆದಿದೆ.
ಮೃಣಾಲ್-ಧನುಷ್ ವಿವಾಹ ವದಂತಿ ಆರಂಭವಾಗಿದ್ದು ಹೇಗೆ? ಕಳೆದ ವರ್ಷ ಆಗಸ್ಟ್‌ನಲ್ಲಿ ‘ಸನ್ ಆಫ್ ಸರ್ದಾರ್ 2’ ಚಿತ್ರದ ವಿಶೇಷ ಪ್ರದರ್ಶನದ ವೇಳೆ ಮೃಣಾಲ್ ಮತ್ತು ಧನುಷ್ ಕೈ ಕೈ ಹಿಡಿದು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಂದಿನಿಂದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಧನುಷ್ ಅವರ ‘ತೇರೆ ಇಷ್ಕ್ ಮೇ’ ಚಿತ್ರದ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲೂ ಮೃಣಾಲ್ ಕಾಣಿಸಿಕೊಂಡಿದ್ದು ಈ ವದಂತಿಗೆ ಪುಷ್ಟಿ ನೀಡಿತ್ತು.
ನಟಿಯ ಸ್ಪಷ್ಟನೆ ಮತ್ತು ಹಳೆಯ ಇತಿಹಾಸ ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಮೃಣಾಲ್, ಈ ಲಿಂಕ್-ಅಪ್ ಸುದ್ದಿಯನ್ನು ನಿರಾಕರಿಸಿದ್ದರು. “ನಾವಿಬ್ಬರು ಕೇವಲ ಒಳ್ಳೆಯ ಸ್ನೇಹಿತರು ಅಷ್ಟೇ. ಅಜಯ್ ದೇವಗನ್ ಅವರ ಆಹ್ವಾನದ ಮೇರೆಗೆ ಧನುಷ್ ಸ್ಕ್ರೀನಿಂಗ್‌ಗೆ ಬಂದಿದ್ದರು” ಎಂದು ಸ್ಪಷ್ಟಪಡಿಸಿದ್ದರು. ಧನುಷ್ ಅವರು ಈ ಹಿಂದೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. 18 ವರ್ಷಗಳ ದಾಂಪತ್ಯದ ನಂತರ 2023ರಲ್ಲಿ ಅವರು ವಿಚ್ಛೇದನ ಘೋಷಿಸಿದ್ದರು.
ವದಂತಿಗಳ ನಡುವೆ ಮೃಣಾಲ್ ಪೋಸ್ಟ್ ಫೆಬ್ರವರಿಯಲ್ಲಿ ಮದುವೆ ಎಂಬ ಸುದ್ದಿಗಳು ಕಾಳ್ಗಿಚ್ಚಿನಂತೆ ಹರಡುತ್ತಿರುವಾಗಲೇ ಮೃಣಾಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಮನೆಯ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “Home” (ಮನೆ) ಎಂದು ಬರೆದು ಹಾರ್ಟ್ ಎಮೋಜಿ ಹಾಕಿದ್ದಾರೆ. ಯಾವುದೇ ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದೆ ತಾವು ಆರಾಮವಾಗಿ ಇರುವುದನ್ನು ಅವರು ಈ ಮೂಲಕ ಸೂಚಿಸಿದ್ದಾರೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.
ವಯಸ್ಸಿನ ಅಂತರ ಎಷ್ಟು? ಧನುಷ್ ಅವರಿಗೆ ಸದ್ಯ 42 ವರ್ಷ ವಯಸ್ಸಾಗಿದ್ದು, ಮೃಣಾಲ್ ಅವರಿಗೆ 32 ವರ್ಷ. ಈ ಜೋಡಿಯ ನಡುವೆ ಸುಮಾರು 9 ರಿಂದ 10 ವರ್ಷಗಳ ವಯಸ್ಸಿನ ಅಂತರವಿದೆ. ಸದ್ಯಕ್ಕೆ ಇಬ್ಬರೂ ಅಧಿಕೃತವಾಗಿ ಮದುವೆ ಸುದ್ದಿಯನ್ನು ಖಚಿತಪಡಿಸಿಲ್ಲ.


