HomeLatest Newsಚಿರತೆಗೂ MRI ಸ್ಕ್ಯಾನಿಂಗ್: ಕಾಲಿನ ಸ್ವಾಧೀನ ಕಳೆದುಕೊಂಡ ‘ಭದ್ರ’ನಿಗೆ ತಪಾಸಣೆ

ಚಿರತೆಗೂ MRI ಸ್ಕ್ಯಾನಿಂಗ್: ಕಾಲಿನ ಸ್ವಾಧೀನ ಕಳೆದುಕೊಂಡ ‘ಭದ್ರ’ನಿಗೆ ತಪಾಸಣೆ

ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ ಲಯನ್ ಸಫಾರಿಯ ಚಿರತೆಯೊಂದನ್ನು ಎಂಆರ್‍ಐ ಸ್ಕ್ಯಾನಿಂಗ್‍ಗೆ ತಂದ ಅಪರೂಪದ ಘಟನೆ ನಡೆದಿದೆ.

ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಡಿಎಫ್‍ಒ ಡಾ|| ಅಮರಾಕ್ಷರ್ ಮಾಹಿತಿ ನೀಡಿದ್ದು, ಲಯನ್ ಸಫಾರಿಯಲ್ಲಿ ಭದ್ರ ಎನ್ನುವ 14 ವರ್ಷದ ಚಿರತೆ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕುಂಟುತ್ತಾ ನಡೆಯುತ್ತಿತ್ತು. ಮೊನ್ನೆಯಿಂದ ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು. ತಕ್ಷಣ ನಾವು ಅದನ್ನು ಉಳಿಸುವ ನಿಟ್ಟಿನಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಮೂಲಕ ಅದರ ಆರೋಗ್ಯದ ಮಾಹಿತಿ ತಿಳಿಯಲು ನಿನ್ನೆ ನಗರದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ಎಂಆರ್‍ಐ ಮಾಡಿಸಿದ್ದೇವೆ.

ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ನುರಿತ ವೈದ್ಯರು ಮತ್ತು ನಂಜಪ್ಪ ಆಸ್ಪತ್ರೆಯ ವೈದ್ಯರು ಇದ್ದು, ಪರಿಶೀಲನೆ ನಡೆಸಿ ಮುಂದಿನ ಚಿಕಿತ್ಸೆಯನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ಚಿರತೆಗಳು ಕಾಡಲ್ಲಿ 8 ರಿಂದ 12 ವರ್ಷ ಬದುಕುತ್ತವೆ. ಆದರೆ ಪ್ರಾಣಿ ಸಂಗ್ರಹಾಲಯದಲ್ಲಿ ಕಾಲ ಕಾಲಕ್ಕೆ ಅದಕ್ಕೆ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಆಹಾರ ದೊರೆಯುವುದರಿಂದ 15ವರ್ಷದ ವರೆಗೆ ಬದುಕುತ್ತದೆ. ಈ ಚಿರತೆಗೆ ಇತ್ತೀಚೆಗೆ ಮೇಲೇಳಲು ಕಷ್ಟವಾಗುತ್ತಿತ್ತು. ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಕಾಲೇಜಿನಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ನಾವು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಎಂಆರ್‍ಐ ಸ್ಕ್ಯಾನಿಂಗ್ ಬಹುದುಬಾರಿಯಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಆ ಸೌಲಭ್ಯ ಇರಲಿಲ್ಲ. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹರಚನೆ ಒಂದೇ ರೀತಿ ಇದ್ದು ಪಶುವೈದ್ಯರ ನೆರವಿನೊಂದಿಗೆ ಅವರ ಸಮ್ಮುಖದಲ್ಲೇ ಈ ಸ್ಕ್ಯಾನಿಂಗ್‍ ಮಾಡಲಾಗಿದೆ. ಪ್ರಸ್ತುತ ಲಯನ್ ಸಫಾರಿಯಲ್ಲಿ 6 ಗಂಡು, 5 ಹೆಣ್ಣು ಚಿರತೆಗಳಿವೆ. ಸ್ಕ್ಯಾನಿಂಗ್ ರಿಪೋರ್ಟ್ ಆಧರಿಸಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಸಗಿ ಆಸ್ಪತ್ರೆಗೆ ಚಿರತೆ ತರಲಾಗಿದ್ದು, ಶಿವಮೊಗ್ಗ ಪಶುವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇನ್ನು ಮುಂದಾದರೂ ಪ್ರಾಣಿಗಳಿಗೆ ಅಗತ್ಯ ಎಲ್ಲಾ ಸೌಲಭ್ಯಗಳು ಸಿಗಲಿ ಎಂದು ನಾಗರೀಕರು ಸಲಹೆ ನೀಡಿದ್ದಾರೆ.

ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಪ್ರದೇಶದಲ್ಲಿ ವಿವಿಧ ಕಾಡು ಪ್ರಾಣಿ ಸಂಕುಲಗಳಿದ್ದು, ಅವುಗಳ ಚಿಕಿತ್ಸೆಗೆ ಆಸ್ಪತ್ರೆ ತಜ್ಞ ಪ್ರಾಣಿ ವೈದ್ಯರೂ ಇಲ್ಲ. 2019ರಿಂದಲೇ ಈ ಕುರಿತು ಸರ್ಕಾರಕ್ಕೆ ಆಗ್ರಹಿಸುತ್ತಿದ್ದರೂ ಅರಣ್ಯ ರೋಧನವಾಗಿದೆ. ನಿನ್ನೆಯ ಶಿವಮೊಗ್ಗದ ಘಟನೆ ಸರ್ಕಾರಕ್ಕೆ ಪಾಠವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿರುವ ಆಯ-ವ್ಯಯದಲ್ಲಿ ಶಿವಮೊಗ್ಗದಲ್ಲಿ ಕಾಡು ಪ್ರಾಣಿಗಳ ಚಿಕಿತ್ಸೆಗೆ ಒಂದು ಹೈಟೆಕ್ ಆಸ್ಪತ್ರೆ ಸ್ಥಾಪನೆಗೆ ಹಣ ಮೀಸಲಿಡಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular