HomeLatest Newsಬೆಂಗಳೂರಿನಲ್ಲಿ ನಶೆಯಲ್ಲಿ ಕಾರಿಗೆ ಬೈಕ್ ಗುದ್ದಿ ಯುವತಿಯರ ರಂಪಾಟ: ಪೊಲೀಸರ ಮೇಲೂ ಹಲ್ಲೆಗೆ ಯತ್ನ

ಬೆಂಗಳೂರಿನಲ್ಲಿ ನಶೆಯಲ್ಲಿ ಕಾರಿಗೆ ಬೈಕ್ ಗುದ್ದಿ ಯುವತಿಯರ ರಂಪಾಟ: ಪೊಲೀಸರ ಮೇಲೂ ಹಲ್ಲೆಗೆ ಯತ್ನ

ಬೆಂಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ಕಂಠ ಪೂರ್ತಿ ಕುಡಿದು ಮಧ್ಯದ ಅಮಲಿನಲ್ಲಿ ಯುವತಿಯರಿಬ್ಬರು ರಸ್ತೆಯಲ್ಲಿಯೇ ಕಿರಿಕ್ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಡೆದಿದೆ.

ನಶೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವತಿಯರಿಬ್ಬರು ಮಧ್ಯರಾತ್ರಿ ಹುಳಿಮಾವು ಬಳಿ ಕ್ಯಾಬ್ ಗೆ ಬೈಕ್ ಡಿಕ್ಕಿ ಹೊಡೆದಿದ್ದಾರೆ. ತಾವಾಗಿಯೇ ಕಾರಿಗೆ ಬೈಕ್ ಗುದ್ದಿ ನಡುರಸ್ತೆಯಲ್ಲಿ ರಂಪಾಟ ನಡೆಸಿದ್ದಾರೆ. ಕ್ಯಾಬ್ ಚಾಲಕ ಪ್ರಶ್ನೆ ಮಾಡಿದ್ದಾಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾಬ್ ಚಾಲಕ ಹಾಗೂ ಯುವತಿಯರ ನಡುವೆ ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರ ಮೇಲೂ ಯುವತಿಯರು ಹಲ್ಲೆಗೆ ಮುಂದಾಗಿದ್ದಾರೆ, ಯುವತಿಯರ ವರ್ತನೆ ಪ್ರಶ್ನಿಸಿದ್ದಕ್ಕೆ ಯುವತಿಯರು ಮಿಡಲ್ ಫಿಂಗರ್ ತೋರಿಸಿ, ಅವಾಚ್ಯವಾಗಿ ನಿಂದಿಸಿದ್ದಾರೆ.

ಸಿಕ್ಕ ಸಿಕವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ಇಬ್ಬರು ಯುವತಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಣ್ಣೆ ಏಟಿನಲ್ಲಿ ಪೊಲೀಸರ ಮೇಲೂ ಯುವತಿಯರು ಹಲ್ಲೆಗೆ ಯತ್ನಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಯುವತಿಯರ ಹೈಡ್ರಾಮ ನಿಂತಿಲ್ಲ. ಸದ್ಯ ಯುವತಿಯರ ವಿರುದ್ಧ ಕ್ಯಾಬ್ ಚಾಲಕ ದೂರು ದಾಖಲಿಸಿದ್ದು, ಇಬ್ಬರು ಯುವತಿಯರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಸ್ನೇಹಿತರ ಜೊತೆ ಜೆ.ಪಿ.ನಗರದ ಖಾಸಗಿ ಹೋಟೆಲ್ ಗೆ ಬಂದಿದ್ದ ಕೋರಮಂಗಲದ ಲೀಸಾ ಹಾಗೂ ಮ್ಯಾಥ್ಯೂ ಎಂಬ ಯುವತಿಯರಿಬ್ಬರೂ ಕಂಠಪೂರ್ತಿ ಕುಡಿದು, ನಶೆಯಲ್ಲಿಯೇ ಸ್ಕೂಟಿ ಓಡಿಸಿಕೊಂಡು ಹೋಗಿದ್ದಾರೆ. ಹೀಗೆ ಹೋಗುವಾಗ ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದು ಕಿರಿಕ್ ಶುರು ಮಾಡಿದ್ದಾರೆ. ಕ್ಯಾಬ್ ಚಾಲಕ ಅಹ್ಮದ್ ಯುವತಿಯರನ್ನು ಪ್ರಶ್ನಿಸಿದ್ದಕ್ಕೆ ಆತನನ್ನು ನಿಂದಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ತಡೆದಿದ್ದಾರೆ. ಈ ವೇಳೆ ಕೈಗೆ ಚೈನ್ ಸುತ್ತಿಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಸದ್ಯ ಇಬ್ಬರು ಯುವತಿಯರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular