HomeIndiaಬೋರ್ವೆಲ್ ಗೆ ಬಿದ್ದ ಬಾಲಕಿ; ಪವಾಡಸದೃಶ ರೀತಿಯಲ್ಲಿ ರಕ್ಷಣೆ

ಬೋರ್ವೆಲ್ ಗೆ ಬಿದ್ದ ಬಾಲಕಿ; ಪವಾಡಸದೃಶ ರೀತಿಯಲ್ಲಿ ರಕ್ಷಣೆ

ಮೂರು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಬೋರ್ವೆಲ್ ಗೆ ಬಿದ್ದಿದ್ದು, ಆಕೆಯನ್ನು ಪವಾಡಸದೃಶ್ಯ ರೀತಿಯಲ್ಲಿ ರಕ್ಷಿಸಲಾಗಿದೆ. ಇಂತಹದೊಂದು ಘಟನೆ ಭಾನುವಾರದಂದು ಮಧ್ಯಪ್ರದೇಶದ ಛತ್ತಾರ್ಪೂರ ಜಿಲ್ಲೆಯಲ್ಲಿ ನಡೆದಿದೆ.

ಬಿಜಾವರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್‌ಗಾಂವ್ ಪಾಲಿ ಗ್ರಾಮದ ನ್ಯಾನ್ಸಿ ಎಂಬ ಹೆಸರಿನ ಈ ಬಾಲಕಿ ಭಾನುವಾರ ಸಂಜೆ ಆಟವಾಡುವಾಗ ಆಕಸ್ಮಿಕವಾಗಿ ತೆರೆದ ಬೋರ್ವೆಲ್ ಗೆ ಬಿದ್ದಿದ್ದಳು.

ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ನಿರಂತರವಾಗಿ 3 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ 30 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದೆ. ಆಕೆಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular