HomeIndiaBIG NEWS: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಕಾರು ಅಪಘಾತ; ಸಂಸದ ಸೇರಿ ನಾಲ್ವರಿಗೆ...

BIG NEWS: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಕಾರು ಅಪಘಾತ; ಸಂಸದ ಸೇರಿ ನಾಲ್ವರಿಗೆ ಗಂಭೀರ ಗಾಯ

ಪಾಟ್ನಾ: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಸದರು ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾದ ಗಾಂಧಿಸೇತು ಬಳಿ ಈ ಅಪಘಾತ ಸಂಭವಿಸಿದೆ, ವೇಗವಾಗಿ ಬಂದ ಸಂಸದರ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಸಂಸದ ಸತೀಶ್ ಚಂದ್ರ, ಕಾರು ಚಾಲಕ, ಭದ್ರತಾ ಸಿಬ್ಬಂದಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸಂಸದ ಸತೀಶ್ ಚಂದ್ರ ತಮ್ಮ ಕಾರಿನಲ್ಲಿ ಹಾಜಿಪುರದಿಂದ ಪಾಟ್ನಾಗೆ ತೆರಳುತ್ತಿದ್ದರು. ಈ ವೇಳೆ ಗಾಂಧಿಸೇತು ಬಳಿ ಈ ಅಪಘಾತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular