HomeEntertainment'ಕಾಗದ' ಚಿತ್ರಕ್ಕೆ ಮನಸೋತ ಸಿನಿ ಪ್ರೇಕ್ಷಕರು

‘ಕಾಗದ’ ಚಿತ್ರಕ್ಕೆ ಮನಸೋತ ಸಿನಿ ಪ್ರೇಕ್ಷಕರು

ಕಳೆದ ಶುಕ್ರವಾರದಂದು ಬಿಡುಗಡೆಯಾಗಿದ್ದ, ರಂಜಿತ್ ನಿರ್ದೇಶನದ ಕಾಗದ ಚಿತ್ರ ರಾಜ್ಯದೆಲ್ಲಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.  ಮುಸ್ಲಿಂ ಹುಡುಗಿ ಹಾಗೂ ಹಿಂದೂ ಹುಡುಗನ ಟೀನೇಜ್ ಲವ್ ಸ್ಟೋರಿಯಲ್ಲಿ ಪ್ರೀತಿ ಹಾಗೂ ಧರ್ಮ ಈ ಎರಡರಲ್ಲಿ ಯಾವುದು ಗೆಲ್ಲುವುದು ಎನ್ನುವುದೇ ಈ ಸಿನಿಮಾ ಕಥೆಯಾಗಿದೆ.

ಈ ಚಿತ್ರವನ್ನು ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಡಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದು, ಆದಿತ್ಯ ಕರೆಗೌಡ ಹಾಗೂ ಅಂಕಿತ ಜೈರಾಮ್ ಸೇರಿದಂತೆ ನೇಹಾ ಪಾಟೀಲ್, ಬಾಲ ರಾಜವಾಡಿ, ಅಶ್ವಥ್ ನೀನಾಸಂ, ಮಾತಾ ಕೋಪಲ, ಶಿವಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್, ತೇಜಶ್ರೀ ತೆರೆ ಹಂಚಿಕೊಂಡಿದ್ದಾರೆ.

ಪ್ರದೀಪ್ ವರ್ಮ ಸಂಗೀತ ಸಂಯೋಜನೆ ನೀಡಿದ್ದು, ಪವನ್ ಗೌಡ ಸಂಕಲನ, ವೇಣುಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ, ಹಾಗೂ ಅರುಣ್ ರೋಹಿತ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular