HomeCrimeಮಗಳನ್ನೇ ಮಾರಾಟ ಮಾಡಿದ ತಾಯಿ ಪ್ರಿಯಕರನೊಂದಿಗೆ ಪರಾರಿ; ಇಬ್ಬರು ಅರೆಸ್ಟ್

ಮಗಳನ್ನೇ ಮಾರಾಟ ಮಾಡಿದ ತಾಯಿ ಪ್ರಿಯಕರನೊಂದಿಗೆ ಪರಾರಿ; ಇಬ್ಬರು ಅರೆಸ್ಟ್

ಮುಜಾಫರ್ ಪುರ: ಪತಿ ಸಾವಿನ ಬಳಿಕ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳನ್ನು ದುಡ್ಡಿಗಾಗಿ ಮಾರಾಟ ಮಾಡಿ ಬಳಿಕ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಜಾರ್ಖಂಡ್ ನ ಮಹಿಳೆ ತನ್ನ ಮಗಳನ್ನು ಎರಡುವರೆ ಲಕ್ಷಕ್ಕೆ ಬಿಹಾರದ ಮುಜಾಫರ್ ಪುರದಲ್ಲಿ ಮಾರಾಟ ಮಾಡಿದ್ದು, ಬಳಿಕ ದೆಹಲಿಯಲ್ಲಿ ಪ್ರಿಯಕರನೊಂದಿಗೆ ವಿವಾಹವಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ತಿಳಿಯುತ್ತಿದ್ದಂತೆ ಯುವತಿಯ ವಿಚಾರಣೆ ನಡೆಸಿದ ಪೊಲೀಸರು ಮಧ್ಯವರ್ತಿಯನ್ನು ಹಾಗೂ ಖರೀದಿದಾರನನ್ನು ಬಂಧಿಸಿದ್ದಾರೆ.

ರಾಂಚಿ ಮೂಲದ ದಂಪತಿ ಕೆಲಸದ ನಿಮಿತ್ತ ಮುಜಾಫರ್ ಪುರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಎರಡು ವರ್ಷಗಳ ಹಿಂದೆ ಮಹಿಳೆಯ ಪತಿ ಸಾವನ್ನಪ್ಪಿದ್ದರು. ಇದರಿಂದ ಮಹಿಳೆಗೆ ಸಂಸಾರ ನಿಭಾಯಿಸುವುದು ಕಷ್ಟವಾಗಿದೆ. ಈ ವೇಳೆ ಯುವಕನೊಬ್ಬ ಮಹಿಳೆಗೆ ಪರಿಚಯವಾಗಿದ್ದು ಆತನೊಂದಿಗೆ ವಿವಾಹವಾಗಲು ಮಹಿಳೆ ತೀರ್ಮಾನಿಸಿದ್ದಾಳೆ. ಆದರೆ ಯುವಕ ಮಹಿಳೆಯ ಇಬ್ಬರು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ತನ್ನ ಸುಖಕ್ಕಾಗಿ ಮಹಿಳೆ ಮಗಳನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾಳೆ. ಬಳಿಕ ಇನ್ನೋರ್ವ ಮಗನನ್ನು ಖಾಸಗಿ ಶಾಲೆಯ ಹಾಸ್ಟೇಲ್ ನಲ್ಲಿ ಬಿಟ್ಟು ತನ್ನ ಪ್ರಿಯಕರನೊಂದಿಗೆ ಮತ್ತೊಂದು ವಿವಾಹವಾಗಿ ದೆಹಲಿಗೆ ತೆರಳಿದ್ದಾಳೆ.

ಮಗನ ಹಾಸ್ಟೇಲ್ ಶುಲ್ಕ ಪಾವತಿಸದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಹಾಸ್ಟೆಲ್ ನವರು ಮಗುವಿನ ಕುಟುಂಬ ಸದಸ್ಯರನ್ನು ಹುಡುಕಿದ್ದಾರೆ. ವಿಷಯ ತಿಳಿದ ಮಗುವಿನ ಅಜ್ಜ-ಅಜ್ಜಿ ರಾಂಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹೆಣ್ಣುಮಗುವನ್ನು ಮಾರಾಟ ಮಾಡಲು ಮಧ್ಯವರ್ತಿಯಾಗಿದ್ದ ವ್ಯಕ್ತಿ ಹಾಗೂ ಬಾಲಕಿಯನ್ನು ಮಹಿಳೆಯಿಂದ ಪಡೆದಿದ್ದ ಇನ್ನೋರ್ವನನ್ನು ಬಂಧಿಸಿದ್ದಾರೆ. ಮಹಿಳೆ ಹಾಗೂ ಪ್ರಿಯಕರನಿಗಾಗಿ ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular