HomeLatest Newsಕೊಳದಲ್ಲಿ ಬಿದ್ದು ತಾಯಿ, ಮಗಳು ಸಾವು

ಕೊಳದಲ್ಲಿ ಬಿದ್ದು ತಾಯಿ, ಮಗಳು ಸಾವು

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದಲ್ಲಿ ಕೊಳದಲ್ಲಿ ಬಿದ್ದು ತಾಯಿ, ಮಗಳು ಸಾವನ್ನಪ್ಪಿದ್ದಾರೆ.

ಹೊಸದುರ್ಗ ಗ್ರಾಮದ ರಾಮದೇವರ ಬೆಟ್ಟದ ಕೊಳದಲ್ಲಿ ಬಿದ್ದು ಪುತ್ರಿ ಮತ್ತು ಆಕೆಯನ್ನು ರಕ್ಷಿಸಲು ಹೋದ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆಂಗೇರಿಯ ಭಾಗ್ಯಲಕ್ಷ್ಮಿ(35), ಚಾರ್ವಿ(16) ಮೃತಪಟ್ಟವರು. ಕಾಲು ಜಾರಿ ಕೊಳಕ್ಕೆ ಬಿದ್ದಿದ್ದ ಚಾರ್ವಿ ರಕ್ಷಿಸಲು ಮುಂದಾದ ಭಾಗ್ಯಲಕ್ಷ್ಮಿ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಭಾಗ್ಯಲಕ್ಷ್ಮಿ ಪತಿ ಜೀವನ್ ಸ್ಥಳದಲ್ಲಿದ್ದರೂ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular