HomeKarnatakaಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ ಬಯಲಿಗೆ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿ 60ಕ್ಕೂ ಅಧಿಕ...

ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ ಬಯಲಿಗೆ: ಮೆಡಿಕಲ್ ಶಾಪ್ ಮಾಲೀಕನ ಮೊಬೈಲ್ ನಲ್ಲಿ 60ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿಯ ಔಷಧಿ ಅಂಗಡಿ ಮಾಲೀಕನೊಬ್ಬನ ಮೊಬೈಲ್ ನಲ್ಲಿ 60ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆಯಾಗಿವೆ.

ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ಅಮ್ಜದ್ ಎಂಬುವನನ್ನು ಸುಮೊಟೋ ಕೇಸ್ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿಯ ಮೇಲಿನ ಬಸ್ ನಿಲ್ದಾಣದಲ್ಲಿ ಮೆಡಿಕಲ್ ಶಾಪ್ ಹೊಂದಿರುವ ಆರೋಪಿ ಅನೇಕ ಯುವತಿಯರು, ಮಹಿಳೆಯರು, ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾಡಿಕೊಳ್ಳುತ್ತಿದ್ದ. ಅವುಗಳನ್ನು ಮೊಬೈಲ್, ಕಂಪ್ಯೂಟರ್ ಸಿಸ್ಟಮ್ ನಲ್ಲಿ ಹಾಕಿಕೊಂಡು ನೋಡುತ್ತಿದ್ದ. ಇಂತಹ 60ಕ್ಕೂ ಅಧಿಕ ದೃಶ್ಯಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಅಲ್ಲದೆ, ಮಹಿಳೆಯರು, ಯುವತಿಯರು ಅಪ್ರಾಪ್ತೆಯರು, ಬಸ್ ನಲ್ಲಿ ಪ್ರಯಾಣಿಸುವಾಗ ದೇಹದ ಭಾಗಗಳನ್ನು ಕದ್ದು ಮುಚ್ಚಿ ಸೆರೆಹಿಡಿಯುತ್ತಿದ್ದ. 30ಕ್ಕೂ ಅಧಿಕ ಮಹಿಳೆಯರನ್ನು ಆರೋಪಿ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಲತಾಣದಲ್ಲಿ ಕೆಲ ವಿಡಿಯೋಗಳು ಹರಿದಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಹೆಣ್ಣು ಮಕ್ಕಳ ಗೌರವ ಘನತೆಗೆ ತಕ್ಕಂತೆ ಯಾವುದೇ ವಿಡಿಯೋ, ಫೋಟೋ ಶೇರ್ ಮಾಡದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದು, ಅಂತಹ ವಿಡಿಯೋ, ಫೋಟೋ ಶೇರ್, ಸೇವ್ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular