ನವದೆಹಲಿ: ನೈರುತ್ಯ ಮುಂಗಾರು ಈ ಬಾರಿ ವಾಡಿಕೆಗಿಂತ ಒಂದು ವಾರ ಮೊದಲೇ ಮೇ 17ಕ್ಕೆ ದಕ್ಷಿಣ ಬಂಗಾಳ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ -ನಿಕೋಬಾರ್ ದ್ವೀಪಗಳಿಗೆ ಮತ್ತು ನಂತರ ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ.
ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿ ಎಂದೇ ಹೇಳಲಾಗುವ ಮುಂಗಾರು ಮಾರುತಗಳು ಈ ವಾರದ ಕೊನೆಯಲ್ಲಿ ಅಂಡಮಾನ್ ಪ್ರವೇಶಿಸುವ ಸಾಧ್ಯತೆ ಇದೆ. ವಾಡಿಕೆಯಂತೆ ಮೇ 22ಕ್ಕೆ ನೈರುತ್ಯ ಮುಂಗಾರು ಮಾರುತಗಳ ಆಗಮಿಸುತ್ತವೆ. ಈ ಬಾರಿ ಐದಾರು ದಿನ ಮುಂಚಿತವಾಗಿ ಆಗಮಿಸಲಿದೆ.
ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತವೆ. ನಂತರದ 3-4 ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶಲಿದ್ದು, ಈ ಮೂಲಕ ನಾಲ್ಕು ತಿಂಗಳ ಮಳೆಗಾಲ ಆರಂಭವಾಗುತ್ತದೆ.

