HomeKarnatakaBIG NEWS: ಹಣ ವರ್ಗಾವಣೆ ಕೇಸ್; ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ CID ಎಸ್ಐಟಿ

BIG NEWS: ಹಣ ವರ್ಗಾವಣೆ ಕೇಸ್; ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ CID ಎಸ್ಐಟಿ

ಬೆಂಗಳೂರು: ವೆಬ್ ಸೈಟ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಸ್ಐಟಿ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾಗಪುರದ ನಿತಿನ್ ಮೆಶ್ರಾಮ್, ದರ್ಶಿತ್ ಪಟೇಲ್ ಬಂಧಿತ ಆರೋಪಿಗಳು. ಬಂಧಿತರು ಇ-ಪ್ರೊಕ್ಯೂರ್ ಮೆಂಟ್ ವೆಬ್ ಸೈಟ್ ಹ್ಯಾಕ್ ಮಾಡಿ 11.5 ಕೋಟಿ ರೂಪಾಯಿ ವಂಚಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತರಿಗೆ ಹ್ಯಾಕರ್ ಶ್ರೀಕಿ ಜೊತೆ ನಂಟಿತ್ತು. ಶ್ರೀಕಿ ವೆಬ್ ಸೈಟ್ ಹ್ಯಾಕ್ ಮಾಡಿ ಬರೋಬ್ಬರಿ 11.5 ಕೋಟಿ ರೂಪಾಯಿ ಲೂಟಿ ಮಾಡಿದ್ದ. ಹೀಗೆ ಲೂಟಿ ಮಾಡಿದ್ದ ಹಣವನ್ನು ಉತರ ಭಾರತದ ಕೆಲ ವ್ಯಕ್ತಿಗಳ ಖಾತೆಗೆ ಹಾಕಿದ್ದ. ಹೀಗೆ ಖಾತೆಗೆ ಹಣ ಹಾಕಿಸಿಕೊಂಡವರಲ್ಲಿ ನಿತಿನ್, ದರ್ಶಿತ್ ಕೂಡ ಇದ್ದರು ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular