HomeLatest News5 ವರ್ಷದಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 362 ಕೋಟಿ ರೂ. ಖರ್ಚು

5 ವರ್ಷದಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 362 ಕೋಟಿ ರೂ. ಖರ್ಚು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021 ರಿಂದ 2025ರ ಅವಧಿಯಲ್ಲಿ ಕೈಗೊಂಡಿದ್ದ ವಿದೇಶ  ಪ್ರವಾಸಗಳಿಗೆ 362 ಕೋಟಿ ರೂ. ಖರ್ಚಾಗಿದೆ.

2025ರ ಒಂದೇ ವರ್ಷದಲ್ಲಿ ಅಮೆರಿಕ, ಫ್ರಾನ್ಸ್ ಸೇರಿ 5 ದೇಶಗಳ ಭೇಟಿಗೆ 67 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿದೆ.

ರಾಜ್ಯಸಭೆ ಕಲಾಪದಲ್ಲಿ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು, 2025 ರಲ್ಲಿ ಮೋದಿ ಅವರ ಅತಿ ದುಬಾರಿ ಪ್ರವಾಸವೆಂದರೆ ಫ್ರಾನ್ಸ್ ಭೇಟಿ. ಫ್ರಾನ್ಸ್ ಪ್ರವಾಸಕ್ಕೆ 25 ಕೋಟಿ ರೂ. ಖರ್ಚಾಗಿದೆ. ಅಮೆರಿಕ ಭೇಟಿಗೆ 16 ಕೋಟಿ ರೂ. ಖರ್ಚಾಗಿದೆ. ಮಾರಿಷಸ್, ಸೈಪ್ರೆಸ್, ಕೆನಡಾ ಪ್ರವಾಸದ ಲೆಕ್ಕ ಬಾಕಿ ಇದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular