HomeKarnatakaಸರ್ಕಾರಿ ನೌಕರರ ವೇತನ ಪರಿಷ್ಕರಣೆ ರೀತಿ ಶಾಸಕರ ವೇತನಕ್ಕೂ ಆಯೋಗ ರಚಿಸಬೇಕು: ಅರವಿಂದ ಬೆಲ್ಲದ

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ರೀತಿ ಶಾಸಕರ ವೇತನಕ್ಕೂ ಆಯೋಗ ರಚಿಸಬೇಕು: ಅರವಿಂದ ಬೆಲ್ಲದ

ಧಾರವಾಡ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸುವ ಮಾದರಿಯಲ್ಲಿ ಶಾಸಕರ ವೇತನ ಪರಿಷ್ಕರಣೆಗೂ ಆಯೋಗ ರಚಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಶಾಸಕರ ವೇತನವನ್ನು ಶಾಸಕರೇ ಹೆಚ್ಚಿಸಿಕೊಳ್ಳುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಚೇರಿ, ವಾಹನ, ಚಾಲಕರು ಸೇರಿ ಇರುವ ವೇತನದಲ್ಲಿ ಎಲ್ಲವನ್ನು ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಶಾಸಕರಿಗೆ ಖರ್ಚುಗಳು ಇರುತ್ತವೆ. ಖರ್ಚು ನಿಭಾಯಿಸಲು ಏನು ವ್ಯವಸ್ಥೆ ಮಾಡಬೇಕು. ವೇತನ, ಪ್ರವಾಸ ಭತ್ಯೆ ಮೊದಲಾದವುಗಳ ಬಗ್ಗೆ ಆಯೋಗ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ. ಶಾಸಕರಿಗೆ ವಾಹನ ಸೌಲಭ್ಯ ಇರುವುದಿಲ್ಲ. ಬಸ್ ನಲ್ಲಿ ಓಡಾಡಿ ಕೆಲಸ ಮಾಡಲು ಆಗುವುದಿಲ್ಲ. ಆಡಳಿತದಲ್ಲಿ ಸುಧಾರಣೆ ಆಗಬೇಕಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular