ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಜೈಲಿನಿಂದ ಬಿಡುಗಡೆಯಾದ ಅವರು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶಾಸಕ ಡಾ. ಚಂದ್ರು ಲಮಾಣಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಶಾಸಕರ ಪೋಸ್ಟ್: ನಾನಿಲ್ಲದೆ ಕ್ಷೇತ್ರದಲ್ಲಿ ನನ್ನ ಪರವಾಗಿ ಕ್ಷೇತ್ರದಾಂದ್ಯಂತ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ. ಧ್ವನಿ ಎತ್ತಿ ನನಗಾಗಿ ಕ್ಷೇತ್ರ ಹಾಗೂ ಜಿಲ್ಲೆಯಾಂದ್ಯಂತ ಪ್ರತಿಭಟಿಸಿ ಹೋರಾಡಿದ ನನ್ನೆಲ್ಲಾ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ನಾನೆಂದೂ ಅ ಜನ್ಮ ಚಿರರುಣಿಯಾಗಿದ್ದೇನೆ ಬಂಧುಗಳೇ.
ನನ್ನನ್ನು ವೈದ್ಯ ವೃತ್ತಿಯಿಂದ ಬಡ್ತಿ ನೀಡಿ ಶಾಸಕಾಂಗ ವ್ಯವಸ್ತೆಗೆ ಕಳುಹಿಸಿದ ಪುಣ್ಯಾತ್ಮ ಮತ ಭಾಂಧವರು ನೀವು. ಯಾವ ಜನ್ಮದ ಪುಣ್ಯವೊ ಎನೋ ಇಂತಹ ಜನತೆಯೊಂದಿಗೆ ನನ್ನ ಜೀವನ ಪ್ರಾರಂಭವಾಗಿದೆ.
ನಾನೂ ಎಂದಿಗೂ ಗೋತ್ತಿದ್ದೊ ಗೋತ್ತಿಲ್ಲದೇಯೊ ತಪ್ಪು ಮಾಡಿಲ್ಲಾ, ಅದು ತಮಗೂ ತಿಳಿದಿದೆ. ಇಂದು ಧರ್ಮ ಅಧರ್ಮದ ಹೋರಾಟದಲ್ಲಿ ಅಧರ್ಮ ಗೆದ್ದು ಜಯಶಾಲಿಯಾಗಿದೆ. ಮುಂದೆ ಕಾನೂನಿನ ಹೋರಾಟದ ಕಾಲಾಂತರದಲ್ಲಿ ಧರ್ಮದ ಉತ್ತರ ತಮಗೆ ತಿಳಿಯಲಿದೆ.
ಅವತ್ತು ಆದ ಆ ಸಂಕಷ್ಟದ ಸಂದರ್ಭ ನನಗೆ ಒಳ್ಳೆಯದಾಗಿದೇ. ಯಾಕೆಂದರೇ ನನ್ನವರು ಯಾರು ನನ್ನ ಪ್ರೀತಿ ಪಾತ್ರರು ಯಾರು ನನಗಾಗಿ ಯಾರು ಇರುವರು ಯಾರು ಬರುವರು ಎಂದು ನಿರುಪಿಸಿದೆ ನಾನಿಲ್ಲದೆ ನನ್ನ ಪರವಾಗಿ ನೀವು ಮಾಡಿದ ಆ ಪ್ರತಿಭಟನೇಯಲ್ಲಿ ಕೂಡಿದ ಜನಸಾಗರವೇ ಸಾಕ್ಷಿ.
ನನ್ನ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರ ಗೌರವಕ್ಕೆ ಹಾಗೂ ತಾಯಿಯಂತೆ ಪೂಜಿಸುವ ನನ್ನ ಪಕ್ಷಕ್ಕೆ ಎಂದಿಗೂ ಮುಜುಗರ ಅಗೌರವ ತರುವ ಕೆಲಸ ನಾನೂ ಮಾಡಿಲ್ಲಾ ಮುಂದೆಯೂ ಮಾಡಲ್ಲಾ ಇದು ಕನ್ನಡಿಯಂತೆ ಪವಿತ್ರವಾಗಿರಲಿದೆ.
ನನ್ನ ಬಿಟ್ಟು ಕೂಡದೆ ಮತ್ತೆ ನಿಮ್ಮೇಲ್ಲರ ಆಶಯದಂತೆ ಅತಿ ಬೇಗನೆ ತಮ್ಮ ಸೇವೆಗಾಗಿ ನನ್ನನ್ನಾ ಕ್ಷೇತ್ರಕ್ಕೆ ಕರೆಯಿಸಿಕೊಂಡವರು ನೀವು. ನಿಮ್ಮ ಸೇವೆ ನಿಮ್ಮೇಲ್ಲರ ಮಾರ್ಗದರ್ಶನದಲ್ಲಿ ನನ್ನೆಲ್ಲಾ ಅಭಿಮಾನದ ಬಳಗದ ಕಾರ್ಯಕರ್ತರೊಂದಿಗೆ ಜನಸೇವೆ ಮಾಡುಲು ಸಿದ್ದನಾಗಿದ್ದೆನೇ.
ಹಿಂದೆ ಅಂತಹ ಸಂಕಷ್ಟದಲ್ಲಿಯೇ ನನ್ನನ್ನಾ ಗೆಲ್ಲಿಸಿದವರು ನೀವು. ಇನ್ನು ಬರುವ ಸಂಕಷ್ಟಗಳು ಬಂದರು ಎಷ್ಟೇಯಾದರು ದಹಿಸುವ ಶಕ್ತಿ ತುಂಬಿದವರು ನೀವು.
ನನ್ನನ್ನಾ ಇನ್ನು ಎನು ಮಾಡಬೇಕು ಅನಿಸುತ್ತೊ ಮಾಡಲಿ ನನ್ನನ್ನ ರಾಜಕೀಯ ಮೋಜಿಗಾಗಿ ಷಡ್ಯಂತ್ರದಿಂದ ಸಿಲುಕಿಸಿದವರು ನನ್ನ ಶತ್ರುಗಳಲ್ಲಾ ಅವರು ನನ್ನವರನ್ನಾ ನನಗೆ ಮತ್ತೆ ನೀಡಿ ನಮ್ಮನ್ನೆಲ್ಲಾ ಒಂದೂಗೂಡಿಸಿದ ಮಿತ್ರರು ಅವರು. ಮುಂದೆ ಇನ್ನೂ ಬರುವವು ಎಲ್ಲವು ಬರಲಿ ನೀವು ನನ್ನೊಂದಿಗಿರಲಿ ಇದೆ ನನ್ನ ಆಶಯ
ಒಬ್ಬ ವೈದ್ಯನಾಗಿ ಕೋವಿಡ್ ನಲ್ಲಿ ನಿಮ್ಮೇಲ್ಲರ ಪ್ರಾಣಕ್ಕಾಗಿ ನಾನೂ ಜಪಿಸಿದ್ದೆ. ಇಂದು ನನ್ನ ಬಿಡುಗಡೆಗಾಗಿ ತಾವೆಲ್ಲರೂ ಜಪಿಸಿ ಹೋರಾಟ ಗೈದಿದ್ದಿರಿ. ಸಂಧರ್ಭ ಮೋಸಗಳು ಬಂದರೇ ನನ್ನ ಪ್ರಾಣವನ್ನು ಬಿಟ್ಟೆನು ನನ್ನ ಜನ….. ನನ್ನ ಪಕ್ಷ …..ತಲೆತಗ್ಗಿಸಲಾರದಂತೆ ಕಾಯ್ದಿರುವೇ ಮುಂದೆಯೂ ಕಾಯುವೇ.
ನಿಮ್ಮೇಲ್ಲರ ಈ ಪ್ರೀತಿ ವಿಶ್ವಾಸಾಭಿಮಾನದ ಮುಂದೆ ನನ್ನನ್ನಾ ಯಾವ ದುಷ್ಟ ಶಕ್ತಿ. ಷಡ್ಯಂತ್ರಗಳು ನನ್ನ ಎನು ಮಾಡಲಾರವು ನಿಮ್ಮ ಆಶಿರ್ವಾದವೇ ನನಗೆ ಶ್ರೀ ರಕ್ಷೇಯಾಗಿ ಕಾಪಾಡಿದೆ.
ನಮ್ಮ ಸಂವಿದಾನದಡಿಯಲ್ಲಿ ಬರುವ ನಮ್ಮ ಕಾನೂನಿಗೆ ನಾವುಗಳು ಎಷ್ಟೇ ಪ್ರಬುದ್ದರಾದರು ದೊಡ್ಡವರಾದರು ಯಾರೇಯಾಗಲಿ ತಲೆ ಬಾಗಲೆ ಬೇಕು
ಧರ್ಮದ ನಿಶ್ಚಯವೂ ನಮ್ಮನ್ನ ಕಾಪಾಡಲಿದೆ. ಆಗಿದ್ದೇಲ್ಲವ ಮರೆಯೋಣಾ. ವಿಶ್ವಾಸದೊಂದಿಗೆ ಮುಂದೆ ಸಾಗೋಣಾ. ನಿಮ್ಮ ಆಶಿರ್ವಾದವೇ ನನ್ನ ಕಾವಲಿಗಿದೆ ಹಾಗೂ ನನ್ನ ಕಾಯಲಿದೆ. ಧನ್ಯವಾದಗಳೊಂದಿಗೆ
ನಿಮ್ಮ ವೈದ್ಯ ಶಾಸಕ
ಡಾ.ಚಂದ್ರು ಕೆ. ಲಮಾಣಿ

