HomeKarnatakaಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ; LKG ಮತ್ತು UKG ತರಗತಿಗಳ ಪ್ರವೇಶಾತಿಕ್ಕಾಗಿ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ; LKG ಮತ್ತು UKG ತರಗತಿಗಳ ಪ್ರವೇಶಾತಿಕ್ಕಾಗಿ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿನ 03 ಅಲ್ಪಸಂಖ್ಯಾತರ ಕರ್ನಾಟಕ ಮೌಲಾನಾ ಆಜಾದ ಪಬ್ಲಿಕ್ ಶಾಲೆಗಳಲ್ಲಿ 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಧಾರವಾಡ ಜಿಲ್ಲೆಯಲ್ಲಿರುವ ನವನಗರ ಹುಬ್ಬಳ್ಳಿ, ಸದಾಶಿವನಗರ ಹುಬ್ಬಳ್ಳಿ ಹಾಗೂ ಕೇಶ್ವಾಪುರ ಹುಬ್ಬಳ್ಳಿ ಶಾಲೆಗಳ ಪ್ರವೇಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ಆನ್‍ಲೈನ್ ವೆಬ್‍ಸೈಟ್ https://erp.dom.karnataka.gov.in/lkg ಮೂಲಕ ಮೇ 8, 2026 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಈ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಊಟ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರಗಳೊಂದಿಗೆ ಇನ್ನಿತರೇ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ಪ್ರವೇಶ ಬಯಸುವ ಅಲ್ಪಸಂಖ್ಯಾತರ ಮತ್ತು ಇತರೆ ಪ್ರವರ್ಗಗಳ ಆಸಕ್ತ ವಿದ್ಯಾರ್ಥಿಗಳು ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಲು ಉಚಿತ ಸೇವೆ ಪಡೆಯಲು ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಥವಾ ಆಯಾ ಶಾಲೆಗಳು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಅಧಿಕಾರಿಗಳ ಕಚೇರಿ-0836-2971590 ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ನವನಗರ ಹುಬ್ಬಳ್ಳಿ-9743404329, ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ಸದಾಶಿವನಗರ ಹುಬ್ಬಳ್ಳಿ-9480407898, ಮುಖ್ಯೋಪಾಧ್ಯಾಯರು,ಮೌಲಾನಾ ಆಜಾದ ಆಂಗ್ಲ ಮಾದರಿ ಶಾಲೆ ಕೇಶ್ವಾಪುರ ಹುಬ್ಬಳ್ಳಿ -9480407898 ಹಾಗೂ ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರ ಧಾರವಾಡ-9738287549, ಹುಬ್ಬಳ್ಳಿ-8867718261 ಗಳಿಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular