HomeKarnatakaಎರಡು ತಿಂಗಳ ನಂತರ ಬಯಲಾಯ್ತು ಬಾಲಕಿ ಸಾವಿನ ರಹಸ್ಯ: ಆರೋಪಿ ಅರೆಸ್ಟ್

ಎರಡು ತಿಂಗಳ ನಂತರ ಬಯಲಾಯ್ತು ಬಾಲಕಿ ಸಾವಿನ ರಹಸ್ಯ: ಆರೋಪಿ ಅರೆಸ್ಟ್

ಕೊಪ್ಪಳ: ಎರಡು ತಿಂಗಳ ನಂತರ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಅನುಶ್ರೀ(7) ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಿದ್ದಲಿಂಗಯ್ಯ ಬಂಧಿತ ಆರೋಪಿ: ಗುಟ್ಕಾ ತಂದು ಕೊಡದಿದ್ದಕ್ಕೆ ಸಿದ್ದಲಿಂಗಯ್ಯ ಬಾಲಕಿ ಕೊಲೆ ಮಾಡಿದ್ದ. ಏಪ್ರಿಲ್ 18ರಂದು ಮಧ್ಯಾಹ್ನ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಬಾಲಕಿ ಪಕ್ಕದ ಮನೆ ನಿವಾಸಿಯಾಗಿರುವ ಸಿದ್ದಲಿಂಗಯ್ಯ ಗುಟ್ಕಾ ತಂದು ಕೊಡುವಂತೆ ಹೇಳಿದ್ದಾನೆ. ತಂದು ಕೊಡದಿದ್ದಾಗ ಕೋಲಿನಿಂದ ಬಾಲಕಿ ತಲೆಗೆ ಹೊಡೆದಿದ್ದು, ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಸಾಕ್ಷಿ ಸಿಗದಂತೆ ಶವವನ್ನು ಗೊಬ್ಬರ ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಹುಡುಕಾಟದ ನಂತರ ಪಾಳುಬಿದ್ದ ಮನೆ ಬಳಿ ಶವವಾಗಿ ಬಾಲಕಿ ಪತ್ತೆಯಾಗಿದ್ದಳು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular