HomeKarnatakaಹಾಸ್ಟೆಲ್ ವಾರ್ಡನ್, ಕೆಎಎಸ್ ಅಧಿಕಾರಿ ಅಕ್ರಮ ಸಂಬಂಧ: ನೋಡಿದ ಪುತ್ರಿ ಮೇಲೆ ಹಲ್ಲೆ

ಹಾಸ್ಟೆಲ್ ವಾರ್ಡನ್, ಕೆಎಎಸ್ ಅಧಿಕಾರಿ ಅಕ್ರಮ ಸಂಬಂಧ: ನೋಡಿದ ಪುತ್ರಿ ಮೇಲೆ ಹಲ್ಲೆ

ಕಲಬುರಗಿ: ತಾಯಿಯ ಅಕ್ರಮ ಸಂಬಂಧ ನೋಡಿದ್ದಕ್ಕೆ ಪುತ್ರಿ ಮೇಲೆ ಹಲ್ಲೆ ನಡೆಸಲಾಗಿದೆ. ತಾಯಿಯ ವಿರುದ್ಧವೇ 9 ವರ್ಷದ ಬಾಲಕಿ ದೂರು ನೀಡಿದ್ದಾಳೆ.

ಕಲಬುರಗಿಯ ಬ್ರಹ್ಮಪೂರ ಠಾಣೆ ಪೋಲಿಸಲು ಹಾಸ್ಟೆಲ್ ವಾರ್ಡನ್ ಆಗಿರುವ ಬಾಲಕಿಯ ತಾಯಿ ಮತ್ತು ಕೆಎಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಬುರಗಿ ವಾಸಿಯಾಗಿದ್ದ ಬಾಲಕಿಯ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಂತರ ಬಾಲಕಿ ತಾಯಿ ಸ್ವಂತ ಊರಾದ ಬೆಳಗಾವಿ ಜಿಲ್ಲೆಯಲ್ಲಿ ನೆಲೆಸಿದ್ದಳು. ಬೈಲಹೊಂಗಲದ ಹಾಸ್ಟೆಲ್ ವೊಂದರಲ್ಲಿ ವಾರ್ಡನ್ ಆಗಿದ್ದ ಬಾಲಕಿಯ ತಾಯಿ ಇಲಾಖೆಯ ಅಧಿಕಾರಿಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದರು. ಮಗಳ ಮುಂದೆ ಹಲವು ಬಾರಿ ಅವರು ಖಾಸಗಿ ಕ್ಷಣ ಕಳೆದಿದ್ದು, ಈ ವಿಚಾರವನ್ನು ಯಾರಿಗೂ ಹೇಳದಂತೆ ಹಿಂಸೆ ನೀಡಿದ್ದರು ಎಂದು ಬಾಲಕಿ ಕಲಬುರಗಿಯ ಬ್ರಹ್ಮಪೂರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular