HomeKarnatakaJOB ALERT : ಬಳ್ಳಾರಿಯಲ್ಲಿ ಜು.18 ರಂದು ಮಿನಿ ಉದ್ಯೋಗ ಮೇಳ : ಉಚಿತ ಪ್ರವೇಶ

JOB ALERT : ಬಳ್ಳಾರಿಯಲ್ಲಿ ಜು.18 ರಂದು ಮಿನಿ ಉದ್ಯೋಗ ಮೇಳ : ಉಚಿತ ಪ್ರವೇಶ

ಬಳ್ಳಾರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಹಳೇ ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಕಚೇರಿ ಆವರಣದಲ್ಲಿ ಜುಲೈ 18 ರಂದು ಬೆಳಿಗ್ಗೆ 10 ರಿಂದ ಗಂಟೆಯಿಂದದ ಸಂಜೆ 04 ಗಂಟೆಯವರೆಗೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ವಿವಿಧ ಖಾಸಗಿ ಕಂಪನಿಗಳಲ್ಲಿ 100 ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲು ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

*ಭಾಗವಹಿಸುವ ಕಂಪನಿ ಮತ್ತು ಹುದ್ದೆ:*

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಸಿ ಮ್ಯಾನ್‌ಟೆಕ್ ಸೋಲ್ಯುಷನ್: ಕ್ಯಾಶ್ ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್

ಹ್ಯಾಲೀಸ್ ಬ್ಲೂ: ಆಪರೇಟರ್ ಟ್ರೈನಿ ಮತ್ತು ಹೆಲ್ಪರ್

ಭಾರತ್ ಫೈನಾನ್ಶಿಯಲ್: ಸಿ.ಆರ್.ಒ

ಕೋಟಕ್ ಬ್ಯಾಂಕ್: ಆರ್.ಒ

ಈ ಸಂದರ್ಶನದಲ್ಲಿ ಭಾಗವಹಿಸಲು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಮುಕ್ತ ಅವಕಾಶವಿದೆ. ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ-ವಿವರ ಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ ಮೊ.7619207762, 6360408094, 7676427793, 8277000619 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ನಿರುದ್ಯೋಗಿ ಯುವಕ-ಯುವತಿಯರು ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬಳ್ಳಾರಿ: ಲೋಕಾಯುಕ್ತ ಜನಸಂಪರ್ಕ ಸಭೆ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ

ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವತಿಯಿಂದ ಜುಲೈ ತಿಂಗಳಿನಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಆಲಿಕೆ ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀಸ್ ಅಧೀಕ್ಷಕ ವಾಸುದೇವರಾಮ್ ಎನ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಸುರೇಶ್ ಎಂ.ಭಾವಿಮನಿ ಮತ್ತು ಗುರಣ್ಣ ಎಸ್.ಹೆಬ್ಬಾಳ್ ಅವರ ನೇತೃತ್ವದಲ್ಲಿ ಈ ಸಭೆಗಳು ನಡೆಯಲಿವೆ.ಸಾರ್ವಜನಿಕರು ಗೌರವಾನ್ವಿತ ಲೋಕಾಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ನಮೂನೆ/ಫಾರಂ ನಂ: 1 ಮತ್ತು 2 ಗಳನ್ನು ಸಹ ನೀಡಲಾಗುತ್ತದೆ.

*ತಾಲ್ಲೂಕುವಾರು ಸಭೆ:*

ಸಂಡೂರು ತಾಲ್ಲೂಕು: ಜುಲೈ 20 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ಸಂಡೂರಿನ ತಹಶೀಲ್ದಾರರ ಕಚೇರಿ ಸಭಾಂಗಣ.

ಕAಪ್ಲಿ ತಾಲ್ಲೂಕು: ಜುಲೈ 20 ರಂದು ಮಧ್ಯಾಹ್ನ 03 ರಿಂದ ಸಂಜೆ 5.30 ಗಂಟೆಯ ವರೆಗೆ ಕಂಪ್ಲಿಯ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.

ಸಿರುಗುಪ್ಪ ತಾಲ್ಲೂಕು: ಜುಲೈ 21 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಿರುಗುಪ್ಪದ ಸಿ.ಡಿ.ಪಿ.ಓ ಕಚೇರಿಯಲ್ಲಿರುವ ಸಭಾಂಗಣ.

ಕುರುಗೋಡು ತಾಲ್ಲೂಕು: ಜುಲೈ 21 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕುರುಗೋಡಿನ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.

ಬಳ್ಳಾರಿ ತಾಲ್ಲೂಕು: ಜುಲೈ 23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬಳ್ಳಾರಿಯ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಭಾಂಗಣ.

ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳಿದ್ದಲ್ಲಿ, ಸಾರ್ವಜನಿಕರು ಮೇಲ್ಕಂಡ ದಿನಾಂಕ, ಸಮಯ ಹಾಗೂ ನಿಗದಿತ ಸ್ಥಳಗಳಲ್ಲಿ ಹಾಜರಿದ್ದು, ತಮ್ಮ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular