HomeLatest News₹11 ಲಕ್ಷ ಸಂಬಳದ ಯುವತಿಗೆ ₹1 ಕೋಟಿ ಪ್ಯಾಕೇಜ್‌ನ ವರ ಬೇಕಂತೆ ಕುಟುಂಬದ ನಿರೀಕ್ಷೆ ಕೇಳಿ...

₹11 ಲಕ್ಷ ಸಂಬಳದ ಯುವತಿಗೆ ₹1 ಕೋಟಿ ಪ್ಯಾಕೇಜ್‌ನ ವರ ಬೇಕಂತೆ ಕುಟುಂಬದ ನಿರೀಕ್ಷೆ ಕೇಳಿ ಬ್ರೋಕರ್ ಹೇಳಿದ್ದೇನು?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ಸೂಕ್ತ ವಧು-ವರರನ್ನು ಹುಡುಕುವುದು ಪೋಷಕರಿಗೆ ಒಂದು ದೊಡ್ಡ ಟಾಸ್ಕ್ ಆಗಿದೆ. ಅದರಲ್ಲೂ ಕೆಲ ಪೋಷಕರ ಅತಿಯಾದ ನಿರೀಕ್ಷೆಗಳು ಮದುವೆ ಬ್ರೋಕರ್ ಅಥವಾ ಮ್ಯಾಚ್‌ಮೇಕರ್‌ಗಳ ತಲೆನೋವನ್ನು ದುಪ್ಪಟ್ಟು ಮಾಡುತ್ತವೆ. ಇದೀಗ ಇದೇ ರೀತಿಯ ವಿಚಿತ್ರ ಘಟನೆಯೊಂದನ್ನು ವೃತ್ತಿಪರ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್ ನಡೆಸುವ ಒಂದ್ರಿಲಾ ಕಪೂರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಬಂಗಾಳಿ ಬ್ರಾಹ್ಮಣ ಯುವತಿಯ ಕುಟುಂಬಸ್ಥರ ಅತಿರೇಕದ ನಿರೀಕ್ಷೆಗಳನ್ನು ಕೇಳಿ ಬೇಸತ್ತ ಮ್ಯಾಚ್‌ಮೇಕರ್ ಒಂದ್ರಿಲಾ, ಕೊನೆಗೆ ಆ ಕ್ಲೈಂಟ್ ಅನ್ನೇ ಕೈಬಿಟ್ಟಿದ್ದಾಗಿ ವಿಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by Oendrila Kapoor | MatchMaker and Dating Coach (@oendrila.kapoor)

ಏನಿದು ಹೈ-ಫೈ ಡಿಮ್ಯಾಂಡ್ ಕಥೆ?

ಆಧುನಿಕ ಯುಗದಲ್ಲಿ ಮದುವೆಯ ವಿಚಾರದಲ್ಲಿ ಪೋಷಕರ ನಿರೀಕ್ಷೆಗಳು ಎಷ್ಟು ಗಗನಕ್ಕೇರಿವೆ ಎಂಬುದಕ್ಕೆ ಒಂದ್ರಿಲಾ ಕಪೂರ್ ಅವರು ನೀಡಿರುವ ಈ ಉದಾಹರಣೆಯೇ ಸಾಕ್ಷಿ:

ವಧುವಿನ ಪ್ರೊಫೈಲ್: 28 ವರ್ಷದ ಬಂಗಾಳಿ ಬ್ರಾಹ್ಮಣ ಯುವತಿ, ವಾರ್ಷಿಕ ಆದಾಯ ₹11 ಲಕ್ಷ ರೂಪಾಯಿ.

ವರನಿಗೆ ಇಟ್ಟ ಬೇಡಿಕೆ: ವಾರ್ಷಿಕ ವೇತನ ಬರೋಬ್ಬರಿ ₹1 ಕೋಟಿ ರೂಪಾಯಿಗಿಂತ ಹೆಚ್ಚು ಇರಬೇಕು ಮತ್ತು ಆತ ಬಂಗಾಳಿ ಬ್ರಾಹ್ಮಣನೇ ಆಗಿರಬೇಕು,

ಒಳ್ಳೆಯ ಹುಡುಗ ಅಂದ್ರು, ಬಂದ ಪ್ರೊಫೈಲ್ ಎಲ್ಲಾ ರಿಜೆಕ್ಟ್ ಮಾಡಿದ್ರು

ಮ್ಯಾಚ್‌ಮೇಕರ್ ಒಂದ್ರಿಲಾ ತಿಳಿಸಿರುವ ಪ್ರಕಾರ, ವಧುವಿನ ಮನೆಯವರು ಆರಂಭದಲ್ಲಿ ನಮಗೆ “ಒಳ್ಳೆಯ ಕುಟುಂಬದ, ಉತ್ತಮ ಉದ್ಯೋಗ ಹೊಂದಿದ ವಿದ್ಯಾವಂತ ಹುಡುಗನಾಗಿದ್ದರೆ ಸಾಕು” ಎಂದು ಸರಳವಾಗಿಯೇ ಹೇಳಿದ್ದರು. ಇದರ ಆಧಾರದ ಮೇಲೆ ಒಂದ್ರಿಲಾ ಅವರ ತಂಡವು ಗೌರವಾನ್ವಿತ ಕುಟುಂಬಗಳಿಗೆ ಸೇರಿದ, ಉತ್ತಮ ಸಂಬಳ ಪಡೆಯುತ್ತಿದ್ದ ಹಲವು ಯುವಕರ ಪ್ರೊಫೈಲ್‌ಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ ಯಾವುದೇ ಸ್ಪಷ್ಟ ಕಾರಣ ನೀಡದೆ ಯುವತಿಯ ಕುಟುಂಬ ಬಂದ ಎಲ್ಲಾ ಪ್ರೊಫೈಲ್‌ಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿತು.

ಕೊನೆಗೆ ಯಾವುದೇ ಪ್ರೊಫೈಲ್ ಇಷ್ಟವಾಗದಿದ್ದಾಗ ಒಂದ್ರಿಲಾ ತಂಡವು ಯುವತಿಯ ಕುಟುಂಬದ ಗುಪ್ತ ಬೇಡಿಕೆ ಏನು ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿತು. ಆಗ ತಿಳಿದುಬಂದ ವಿಷಯ ಏನೆಂದರೆ, ಆ ಕುಟುಂಬ ತಿರಸ್ಕರಿಸದೆ ಶಾರ್ಟ್‌ಲಿಸ್ಟ್ ಮಾಡಿದ ಪ್ರತಿಯೊಬ್ಬ ಯುವಕನ ಸಂಬಳವೂ ವರ್ಷಕ್ಕೆ 1 ಕೋಟಿ ರೂಪಾಯಿಗಿಂತ ಅಧಿಕವಾಗಿತ್ತು

ಕೊನೆಗೆ ಒಂದ್ರಿಲಾ ತಂಡವು ಆ ₹1 ಕೋಟಿ ಗಳಿಸುವ ಹುಡುಗರನ್ನು ಸಂಪರ್ಕಿಸಿದಾಗ, ಯಾರೊಬ್ಬರೂ ಈ ಯುವತಿಯನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಅತಿಯಾದ ನಿರೀಕ್ಷೆ ಹೊಂದಿದ್ದ ಆ ಕ್ಲೈಂಟ್ ಅನ್ನು ಒಂದ್ರಿಲಾ ಕಪೂರ್ ಕೈಬಿಟ್ಟಿದ್ದಾರೆ. ವಿಡಿಯೊದಲ್ಲಿ ಆಕ್ರೋಶ ಹೊರಹಾಕಿರುವ ಅವರು, ಅಷ್ಟೊಂದು ದೊಡ್ಡ ಮೊತ್ತ ಗಳಿಸುವ ಪುರುಷರು ಕುರುಡರಲ್ಲ. ಅವರಿಗೆ ಯುವತಿಯರ ಹಾಗೂ ಅವರ ಕುಟುಂಬದ ಅತಿಯಾದ ನಿರೀಕ್ಷೆಗಳು ಮತ್ತು ಸ್ವಾರ್ಥ ಸುಲಭವಾಗಿ ಅರ್ಥವಾಗುತ್ತವೆ, ಎಂದು ಕಿಡಿಕಾರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮದುವೆ ಎಂಬುದು ಒಂದು ಪವಿತ್ರ ಬಂಧವಾಗಿ ಉಳಿದಿಲ್ಲ, ಅದೊಂದು ವ್ಯಾಪಾರವಾಗಿ ಬದಲಾಗಿದೆ. ಇಂದಿನ ಕೆಲವು ಯುವತಿಯರು ಮತ್ತು ಅವರ ಪೋಷಕರಿಗೆ ಜೀವನ ಸಂಗಾತಿಯ ಗುಣಕ್ಕಿಂತ ಹಣವಷ್ಟೇ ಮುಖ್ಯವಾಗಿದೆ ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಕಿಡಿಕಾರುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular