HomeLatest Newsಟೈಮ್ ಟ್ರಾವೆಲ್ ಮಾಡಲು ಅವಕಾಶ ಸಿಕ್ಕಿದ್ರೆ ಅಪ್ಪು ಸಾವು ತಪ್ಪಿಸುತ್ತಿದ್ದೆ ಹಾಗೂ ದರ್ಶನ್‌ರ ಆ ಘಟನೆ...

ಟೈಮ್ ಟ್ರಾವೆಲ್ ಮಾಡಲು ಅವಕಾಶ ಸಿಕ್ಕಿದ್ರೆ ಅಪ್ಪು ಸಾವು ತಪ್ಪಿಸುತ್ತಿದ್ದೆ ಹಾಗೂ ದರ್ಶನ್‌ರ ಆ ಘಟನೆ ತಡೆಯುತ್ತಿದ್ದೆ; ಧನಂಜಯ್ ಭಾವುಕ

ಒಂದೆಡೆ ಸರಿಯಾದ ಮಳೆ ಇಲ್ಲದೇ ಜನರು ಬರದ ಪರಿಸ್ಥಿತಿಯ ಭೀತಿಯಲ್ಲಿದ್ದರೆ ಮತ್ತೊಂದೆಡೆ ಕನ್ನಡ ಚಿತ್ರರಂಗ ಸಹ ಸರಿಯಾದ ಹಿಟ್ ಇಲ್ಲದೇ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವರ್ಷದ ಮೊದಲಾರ್ಧ ಮುಗಿದರೂ ಸಹ ಕಥೆ ವಿಚಾರದಲ್ಲೂ ಹಾಗೂ ಹಣದ ವಿಚಾರದಲ್ಲೂ ಕನ್ನಡದ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಯೇ ಇಲ್ಲ.

ಇನ್ನು ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಚಿತ್ರಗಳತ್ತ ಕನ್ನಡ ಸಿನಿ ರಸಿಕನ ಚಿತ್ತ ನೆಟ್ಟಿದ್ದು, ಕನ್ನಡ ಚಿತ್ರರಂಗ ಪುಟಿದೇಳಲಿ ಎಂದು ಆಶಿಸಿದ್ದಾರೆ. ಅದರಂತೆ ಡಾಲಿ ಧನಂಜಯ್ ನಿರ್ಮಿಸಿ, ನಟಿಸಿರುವ ಹಾಗೂ ಪೂರ್ಣಚಂದ್ರ ಮೈಸೂರು ನಿರ್ದೇಶನದ ಮದರ್ ಪ್ರಾಮಿಸ್ ಕಳೆದ ವಾರವಷ್ಟೇ ಬಿಡುಗಡೆಗೊಂಡು ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಚಿತ್ರದ ಕುರಿತು ಧನಂಜಯ್ ಸುದ್ದಿ ವಾಹಿನಿ ಟಿವಿ9 ನಡೆಸಿದ ಸಂದರ್ಶನದಲ್ಲಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಇದೇ ವೇಳೆ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಮಂಕಾಗಿರುವುದರ ಬಗ್ಗೆ ಸಹ ಮಾತನಾಡಿದ್ದಾರೆ.

ನಿರೂಪಕರು ಒಂದೆಡೆ ಪುನೀತ್ ರಾಜ್‌ಕುಮಾರ್‌ ನಿಧನ ಹಾಗೂ ದರ್ಶನ್ ಅವರು ಜೈಲು ಪಾಲಾಗಿದ್ದು ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಿತೇ ಎಂಬ ಪ್ರಶ್ನೆಯನ್ನು ಧನಂಜಯ್‌ಗೆ ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ಧನಂಜಯ್ ಪುನೀತ್ ನಿಧನ ಹಾಗೂ ದರ್ಶನ್ ಜೈಲಿಗೆ ಹೋಗಿದ್ದು ದೊಡ್ಡ ಪೆಟ್ಟುಗಳು ಎಂದರು. ಪುನೀತ್ ಹಾಗೂ ದರ್ಶನ್ ಕನ್ನಡ ಚಿತ್ರರಂಗದ ಎರಡು ದೊಡ್ಡ ಮರಗಳು ಹಾಗೂ ಎರಡು ದೊಡ್ಡ ಶಕ್ತಿಗಳು ಎಂದು ಧನಂಜಯ್ ಇಬ್ಬರ ಮಹತ್ವವನ್ನು ತಿಳಿಸಿದರು.

ಅಲ್ಲದೇ ‘ನಾನು ನನ್ನ ಸ್ನೇಹಿತರ ಜತೆ ಯಾವಾಗಲೂ ಹೇಳ್ತಾ ಇರುತ್ತೇನೆ. ನನಗೇನಾದರೂ ಟೈಮ್ ಟ್ರಾವೆಲ್ ಮಾಡುವ ಅವಕಾಶ ಕೊಟ್ರೆ ಆ ಎರಡು ಘಟನೆಯನ್ನು ತಡೆಯುತ್ತೇನೆ ಅಂತ. ಆ ಎರಡು ಘಟನೆಗಳು ಆಗಬಾರದಾಗಿತ್ತು. ಅವೆರಡು ಬಹಳ ದೊಡ್ಡ ಪ್ರಭಾವ ಬೀರಿದವು. ಆದರೆ ನಾವು ಅದನ್ನು ಬದಲಿಸಲು ಆಗಲ್ಲ, ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಿಕೊಂಡು ಕೆಲಸ ಮಾಡಿಕೊಂಡುಹೋಗಬೇಕು’ ಎಂದು ಧನಂಜಯ್ ಭಾವುಕರಾಗಿ ನುಡಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular