HomeLatest Newsಬೇಸಿಗೆಯಲ್ಲಿ ಹಾಲು ಪದೇ ಪದೇ ಕೆಡುತ್ತಿದೆಯೇ? ಹಾಗಾದ್ರೆ ಈ ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

ಬೇಸಿಗೆಯಲ್ಲಿ ಹಾಲು ಪದೇ ಪದೇ ಕೆಡುತ್ತಿದೆಯೇ? ಹಾಗಾದ್ರೆ ಈ ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು, ಕಿಚನ್‌ನಲ್ಲಿ ಅಡುಗೆ ಪದಾರ್ಥಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಅದರಲ್ಲೂ ಹಾಲಿನ ಕಥೆ ಕೇಳಲೇಬೇಡಿ ಬೆಳಿಗ್ಗೆ ತಂದ ಹಾಲು ಮಧ್ಯಾಹ್ನಕ್ಕಾಗಲೇ ಒಡೆದು ಹೋಗುವುದು ಅಥವಾ ಕೆಟ್ಟು ಹೋಗುವುದು ಸಾಮಾನ್ಯ. ವಿಪರೀತ ಶಾಖದಿಂದಾಗಿ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಯಾಗುವುದೇ ಇದಕ್ಕೆ ಮುಖ್ಯ ಕಾರಣ.

ನಿಮ್ಮ ಮನೆಯಲ್ಲೂ ಹಾಲು ಹೀಗೆ ಪದೆ ಪದೇ ಹಾಳಾಗುತ್ತಿದ್ದರೆ, ಹಿರಿಯರು ಪಾಲಿಸುತ್ತಿದ್ದ ಈ ಕೆಲವು ಸಿಂಪಲ್ ಮತ್ತು ಎಫೆಕ್ಟಿವ್ ಟ್ರಿಕ್ಸ್ ನಿಮಗಾಗಿ ಇಲ್ಲಿವೆ:

1.ಒಂದು ಚಿಟಿಕೆ ಅಡುಗೆ ಸೋಡಾದ ಮ್ಯಾಜಿಕ್
ಹೌದು, ಹಾಲು ಕಾಯಿಸುವಾಗ ಕೇವಲ ಒಂದು ಚಿಟಿಕೆ ಅಡುಗೆ ಸೋಡಾ (Baking Soda) ಸೇರಿಸಿ ನೋಡಿ. ಇದು ಹಾಲಿನ pH ಮಟ್ಟವನ್ನು ಸಮತೋಲನಗೊಳಿಸಿ, ವಿಪರೀತ ಶಾಖವಿದ್ದರೂ ಹಾಲು ಒಡೆಯದಂತೆ ತಡೆಯುತ್ತದೆ. ಆದರೆ ನೆನಪಿಡಿ, ಸೋಡಾ ಪ್ರಮಾಣ ಹೆಚ್ಚಾಗಬಾರದು, ಕೇವಲ ಒಂದು ಚಿಟಿಕೆ ಮಾತ್ರ ಸಾಕು.

2.ಪಾತ್ರೆ ತೊಳೆಯುವ ವಿಧಾನದಲ್ಲೂ ಇದೆ ಟ್ರಿಕ್
ಹಾಲು ಕಾಯಿಸಲು ಬಳಸುವ ಪಾತ್ರೆಯನ್ನು ಮೊದಲು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಪಾತ್ರೆಯ ತಳದಲ್ಲಿ ಸ್ವಲ್ಪ ನೀರು ಇರುವಂತೆಯೇ ಹಾಲನ್ನು ಸುರಿಯಿರಿ. ಇದು ಹಾಲು ತಳ ಹಿಡಿಯದಂತೆ ಮತ್ತು ದೀರ್ಘಕಾಲ ತಾಜಾವಾಗಿರಲು ಸಹಾಯ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3.ಏಲಕ್ಕಿ ನೀಡುತ್ತೆ ದುಪ್ಪಟ್ಟು ಲಾಭ
ಹಾಲು ಕಾಯಿಸುವಾಗ ಒಂದು ಅಥವಾ ಎರಡು ಹಸಿರು ಏಲಕ್ಕಿಗಳನ್ನು ಜಜ್ಜಿ ಹಾಕಿ. ಇದು ಹಾಲಿಗೆ ಅದ್ಭುತ ರುಚಿ ಮತ್ತು ಪರಿಮಳ ನೀಡುವುದಲ್ಲದೆ, ಹಾಲಿನ ಬಾಳಿಕೆಯನ್ನು (Shelf life) ಹೆಚ್ಚಿಸುತ್ತದೆ.

4.ಕಾಯಿಸುವ ಸಮಯದ ಬಗ್ಗೆ ಇರಲಿ ಗಮನ
ಬೇಸಿಗೆ ಕಾಲದಲ್ಲಿ ಕನಿಷ್ಠ 8 ಗಂಟೆಗೊಮ್ಮೆ ಹಾಲನ್ನು ಕಾಯಿಸುವುದು ಕಡ್ಡಾಯ. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಹಾಲನ್ನು ಹಾಳುಮಾಡುತ್ತವೆ.

5.ಫ್ರಿಡ್ಜ್‌ನಲ್ಲಿಡುವ ಮುನ್ನ ಈ ತಪ್ಪು ಮಾಡಬೇಡಿ
ಅನೇಕರು ಹಾಲು ಕಾಯಿಸಿದ ತಕ್ಷಣ ಬಿಸಿ ಬಿಸಿಯಾಗಿರುವಾಗಲೇ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ತಪ್ಪು! ಬಿಸಿ ಹಾಲನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅದು ಬೇಗನೆ ಹಾಳಾಗುತ್ತದೆ. ಹಾಲು ಸಂಪೂರ್ಣವಾಗಿ ತಣ್ಣಗಾದ ನಂತರವೇ (Room temperature) ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular