HomeBusinessGold Rate Fall: ಮಧ್ಯಪ್ರಾಚ್ಯ ಬಿಕ್ಕಟ್ಟು ಎಫೆಕ್ಟ್: ಒಂದೇ ದಿನ ₹3,290 ಅಗ್ಗವಾದ ಚಿನ್ನ ಬೆಳ್ಳಿ ಬೆಲೆ 35...

Gold Rate Fall: ಮಧ್ಯಪ್ರಾಚ್ಯ ಬಿಕ್ಕಟ್ಟು ಎಫೆಕ್ಟ್: ಒಂದೇ ದಿನ ₹3,290 ಅಗ್ಗವಾದ ಚಿನ್ನ ಬೆಳ್ಳಿ ಬೆಲೆ 35 ಸಾವಿರ ರೂ. ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿ ತಾರಕಕ್ಕೇರಿದ್ದು, ಇದು ನೇರವಾಗಿ ಭಾರತದ ಷೇರು ಮಾರುಕಟ್ಟೆ ಮತ್ತು ಚಿನ್ನದ ದರದ ಮೇಲೆ ಪ್ರಭಾವ ಬೀರಿದೆ.

ಯುದ್ಧದ ಎಫೆಕ್ಟ್: ಮಾರುಕಟ್ಟೆ ಅಸ್ತವ್ಯಸ್ತ
ಮಧ್ಯಪ್ರಾಚ್ಯದ ಆಕಾಶದಲ್ಲಿ ಮಿಸೈಲ್‌ಗಳು ಸ್ಫೋಟಗೊಳ್ಳುತ್ತಿದ್ದಂತೆ ಇತ್ತ ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ಅಂತರಾಷ್ಟ್ರೀಯ ಬಿಕ್ಕಟ್ಟು ಎದುರಾದಾಗ ಚಿನ್ನದ ಬೆಲೆ ಏರಿಕೆಯ ಹಾದಿ ಹಿಡಿಯುತ್ತದೆ. ಆದರೆ, ಇಂದು (ಮಾರ್ಚ್ 02, 2026) ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಅನಿರೀಕ್ಷಿತ ಇಳಿಕೆ ಕಂಡುಬಂದಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ.

ಇಂದಿನ ಚಿನ್ನದ ದರ ವಿವರ (24K ಶುದ್ಧ ಚಿನ್ನ):


ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಗ್ರಾಂ ಚಿನ್ನ: ಇಂದು ₹16,980 (ನಿನ್ನೆ ₹17,309 ಇತ್ತು. ಅಂದರೆ ₹329 ಇಳಿಕೆ).

10 ಗ್ರಾಂ ಚಿನ್ನ: ಇಂದು ₹1,69,800 (ನಿನ್ನೆ ₹1,73,090 ಇತ್ತು. ಒಂದೇ ದಿನದಲ್ಲಿ ₹3,290 ಇಳಿಕೆ).

100 ಗ್ರಾಂ ಚಿನ್ನ: ಬರೋಬ್ಬರಿ ₹32,900 ಇಳಿಕೆ ಕಂಡು ₹16,98,000 ದಾಖಲಾಗಿದೆ.

ಬೆಳ್ಳಿ ಬೆಲೆ ಗಗನಕ್ಕೆ


ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಬೆಳ್ಳಿ ಮಾತ್ರ ಸಾಮಾನ್ಯ ಜನರ ಕೈಗೆಟುಕದ ಮಟ್ಟಕ್ಕೆ ಏರಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 35 ಸಾವಿರ ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ₹3,30,000 ತಲುಪಿದೆ. ಯುದ್ಧದ ಭೀತಿಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಬೆಳ್ಳಿಯತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಭೀತಿ?
ಮಾರ್ಕೆಟ್ ತಜ್ಞರ ಪ್ರಕಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಮುನ್ಸೂಚನೆ ನೀಡುತ್ತಿದೆ. ಮಾರುಕಟ್ಟೆ ಆರಂಭವಾದ ತಕ್ಷಣ 10 ಗ್ರಾಂ ಬೆಲೆಯಲ್ಲಿ ₹5,500 ವರೆಗೂ ಜಿಗಿತ ಕಂಡಿದ್ದು, ಶೇ. 2.50 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ಮುಂದುವರಿದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುವುದರಲ್ಲಿ ಸಂಶಯವಿಲ್ಲ.

ಭಾರತದಲ್ಲಿ 24K ಚಿನ್ನದ ಬೆಲೆ

1 ಗ್ರಾಂ (24K ಚಿನ್ನ):₹16,980

8 ಗ್ರಾಂ (24K ಚಿನ್ನ):₹1,35,840

10 ಗ್ರಾಂ (24K ಚಿನ್ನ):₹1,69,800

00 ಗ್ರಾಂ (24K ಚಿನ್ನ):₹16,98,000

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24K ಚಿನ್ನದ ದರ

ನಗರ 24K ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು₹16,980

ಚೆನ್ನೈ₹17,084

ದೆಹಲಿ₹16,995

ಮುಂಬೈ₹16,980

ಹೈದರಾಬಾದ್₹16,980

ಕೋಲ್ಕತ್ತಾ₹16,980

ಕೇರಳ₹16,980

ಪುಣೆ₹16,980

ಅಹಮದಾಬಾದ್₹16,985

ವಡೋದರಾ₹16,985

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular