HomeKarnatakaಸೆ.6ರಂದು ಬೆಂಗಳೂರಲ್ಲಿ ‘ಮೇಧಾನಮನಮ್’ಸಂಸ್ಕೃತೋತ್ಸವ ; ಸಂಸ್ಕೃತಾಭಿಮಾನಿಗಳಿಗೆ ವಿಶೇಷ ಕಾರ್ಯಕ್ರಮ

ಸೆ.6ರಂದು ಬೆಂಗಳೂರಲ್ಲಿ ‘ಮೇಧಾನಮನಮ್’ಸಂಸ್ಕೃತೋತ್ಸವ ; ಸಂಸ್ಕೃತಾಭಿಮಾನಿಗಳಿಗೆ ವಿಶೇಷ ಕಾರ್ಯಕ್ರಮ

ಬೆಂಗಳೂರು: ಮೈತ್ರೀ ಸಂಸ್ಕೃತ–ಸಂಸ್ಕೃತಿ ಪ್ರತಿಷ್ಠಾನಮ್‌ (ರಿ.) ವತಿಯಿಂದ ‘ಮೇಧಾನಮನಮ್ ಸಂಸ್ಕೃತೋತ್ಸವಃ’ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಂಸ್ಕೃತಾಭಿಮಾನಿಗಳು, ಸಂಸ್ಕೃತಜ್ಞರು ಹಾಗೂ ಸಂಸ್ಕೃತ ಕ್ಷೇತ್ರದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಂಸ್ಕೃತ ಭಾವಗೀತೆಗಳ ಪ್ರಸ್ತುತಿ, ದೇಶ ರಕ್ಷಣೆಗೆ ಕಟಿಬದ್ಧ ಸೇನಾಧಿಕಾರಿಗಳಿಗೆ ಗೌರವಾರ್ಪಣೆ, ನಾಡಿನ ಬಹುಶ್ರುತ ವಿದ್ವಾಂಸರಿಗೆ ಅಭಿನಂದನೆ, ಸಂಸ್ಕೃತ–ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.ಇದರ ಜೊತೆಗೆ ಸಂಸ್ಕೃತ ಕಲಿಕೆಯ ಪುಸ್ತಕಗಳ ಲೋಕಾರ್ಪಣೆ ಹಾಗೂ ಪ್ರದರ್ಶನ ಕೂಡ ಆಯೋಜಿಸಲಾಗಿದೆ.

ಸಂಸ್ಕೃತಜ್ಞರು, ಸಂಸ್ಕೃತಾಭಿಮಾನಿಗಳು ಹಾಗೂ ಸಂಸ್ಕೃತ ಕ್ಷೇತ್ರದ ಸಾಧಕರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಎ.ಜಿ. ನಾಯಕ್ ಮೊ.: 9449047372, 9449132124 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಯಕ್ರಮದ ವಿವರ

  • ದಿನಾಂಕ: ಸೆಪ್ಟೆಂಬರ್‌ 6, 2026, ಭಾನುವಾರ

  • ಸಮಯ: ಬೆಳಗ್ಗೆ 9 ಗಂಟೆಗೆ

  • ಸ್ಥಳ: ರವೀಂದ್ರ ಕಲಾಕ್ಷೇತ್ರ ಸಭಾಂಗಣ, ಜೆ.ಸಿ. ರಸ್ತೆ, ಬೆಂಗಳೂರು

  • ಆಯೋಜಕರು: ಮೈತ್ರೀ ಸಂಸ್ಕೃತ–ಸಂಸ್ಕೃತಿ ಪ್ರತಿಷ್ಠಾನಮ್‌ (ರಿ.), ಬೆಂಗಳೂರು  

ಸಂಸ್ಕೃತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.

 

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular