HomeKarnatakaBREAKING: ಮೀಟರ್ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿ: ಲೈವ್ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆ

BREAKING: ಮೀಟರ್ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿ: ಲೈವ್ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆ

ಬೆಂಗಳೂರು: ಮೀಟರ್ ಬಡ್ಡಿ ದಂಧೆ ಕೋರರ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಆಟೋ ಚಾಲಕನೊಬ್ಬ ಲೈವ್ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಯೂಸೂಫ್ ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ. ಯೂಸೂಫ್, ಉಮೇಶ್ ಎಂಬಾತನಿಂದ 1.75 ಲಕ್ಷ ಹಣ ಪಡೆದಿದ್ದ. 30% ಬಡ್ಡಿ ನೀಡುವಂತೆ ಉಮೇಶ್ ಪ್ರತಿದಿನ ಟಾರ್ಚರ್ ಕೊಡುತ್ತಿದ್ದನಂತೆ. ಹಣ ಕೊಡದಿದ್ದರೆ ಪತ್ನಿ ಹಾಗೂ ಮಗಳನ್ನು ಕಳುಹಿಸುವಂತೆ ಕಿರುಕುಳ ನೀಡುತ್ತಿದ್ದಂತೆ.

ಸಾಲಗಾರರ ಕಿರುಕುಳದಿಂದ ಮನನೊಂದ ಯೂಸೂಫ್, ಲೈವ್ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular