HomeKarnatakaಬೆಳಗಾಯಲ್ಲಿ ಕುಸ್ತಿ ಪಂದ್ಯಾವಳಿ; ಉದ್ಯಮಿ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆಗೆ ಯತ್ನ

ಬೆಳಗಾಯಲ್ಲಿ ಕುಸ್ತಿ ಪಂದ್ಯಾವಳಿ; ಉದ್ಯಮಿ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆಗೆ ಯತ್ನ

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ವೇಳೆ ಜೈ ಮಹಾರಾಷ್ಟ್ರ ಎಂದು ಕೂಗಿದ್ದಕ್ಕೆ ಬುದ್ಧಿವಾದ ಹೇಳಿದ್ದಕ್ಕೆ ಎಂಇಎಸ್ ಪುಂಡರು ಉದ್ಯಮಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಆನಂದವಾಡಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಕುಸ್ತಿಪಂದ್ಯಾವಳಿ ಏರ್ಪಡಿಸಲಾಗಿತ್ತು. ಮೈಕ್ ನಲ್ಲಿ ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಕುಸ್ತಿಪಟುಗಳು ಘೋಷಣೆ ಕೂಗುತ್ತಿದ್ದರು. ಕೂಡಲೇ ಉದ್ಯಮಿ ಶ್ರೀಕಾಂತ್ ಕುಸ್ತಿಪಟುವಿನ ಕೈಯಿಂದ ಮೈಕ್ ಕಿತ್ತುಕೊಂಡು. ಸಮಸ್ಯೆ ಸೃಷ್ಟಿ ಮಾಡುತ್ತಿದ್ದೀಯಾ. ನಾವೆಲ್ಲ ಒಂದೇ ನಾಡಿನ ಮಕ್ಕಳು ಎಂದು ಬುದ್ಧಿ ಹೇಳಿದ್ದಾರೆ. ಎಲ್ಲರೂ ಸಹೋದರರಂತೆ ಬಾಳಬೇಕು ಒಂದುತೆರವಾದ ಘೋಷಣೆ ಸರಿಯಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಎಂಇಎಸ್ ಪುಂಡರು ಶ್ರೀಕಾಂತ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಶ್ರೀಕಾಂತ್ ಹಾಗೂ ಬೆಂಬಲಿಗರು ಕನ್ನಡಕ್ಕೆ, ಕರ್ನಾಟಕಕ್ಕೆ ಜೈ ಎಂದು ಘೋಷಣೆ ಕೂಗಿದ್ದಾರೆ. ಜಗಳ ತಾರಕ್ಕೇರಿದ್ದು, ಎಂಇಎಸ್ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಪುಂಡಾಟ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular