HomeLatest Newsಸ್ಪೀಡ್ ಪೋಸ್ಟ್ ನಲ್ಲಿ ರಿಜಿಸ್ಟ್ರಾರ್ ಪೋಸ್ಟ್ ವಿಲೀನ: ಎಲ್ಲಾ ಇಲಾಖೆ ಲಕೋಟೆ ಮೇಲೆ Speed Post...

ಸ್ಪೀಡ್ ಪೋಸ್ಟ್ ನಲ್ಲಿ ರಿಜಿಸ್ಟ್ರಾರ್ ಪೋಸ್ಟ್ ವಿಲೀನ: ಎಲ್ಲಾ ಇಲಾಖೆ ಲಕೋಟೆ ಮೇಲೆ Speed Post ಎಂದು ನಮೂದಿಸಲು ಆದೇಶ

ಬೆಂಗಳೂರು: ಭಾರತ ಸರ್ಕಾರದ ಅಂಚೆ ಸಚಿವಾಲಯದ ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ಅಂಚೆ ಇಲಾಖೆಯು ತನ್ನ ಅಂಚೆ ಉತ್ಪನ್ನಗಳ ಸೇವೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅದರಂತೆ, ದಿನಾಂಕ:01.08.2025 ರಿಂದ ನೋಂದಾಯಿತ ಅಂಚೆ ಸೇವೆಯನ್ನು ಕಾರ್ಯಚರಣೆಯ ದಕ್ಷತೆ, ಟ್ಯಾಕಿಂಗ್ ಸಾಮರ್ಥ್ಯ ಮತ್ತು ಗ್ರಾಹಕರ ಅನುಕೂಲತೆಯನ್ನು ಸುಧಾರಣೆಗೊಳಿಸುವುದಕ್ಕಾಗಿ, ಸಂವಹನದ ಅಗತ್ಯತೆಗಳು ಮತ್ತು ತಾಂತ್ರಿಕ ಪುಗತಿಗೆ ಅನುಗುಣವಾಗಿ ‘ಸ್ಪೀಡ್ –ಪೋಸ್ಟ್’ ಸೇವೆಯಲ್ಲಿ ವಿಲೀನಗೊಳಿಸುತ್ತಿದೆ.

ಆದ್ದರಿಂದ, ಸಚಿವಾಲಯದ ಎಲ್ಲಾ ಇಲಾಖೆಗಳು/ ಮುಖ್ಯಮಂತ್ರಿಯವರ ಸಚಿವಾಲಯ/ ಸಚಿವರ ಆಪ್ತ ಶಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ(ಸಾಮಾನ್ಯ ರವಾನೆ) ಶಾಖೆಗೆ ಕಳುಹಿಸುವ ನೋಂದಾಯಿತ ಅಂಚೆ ಲಕೋಟೆಗಳ ಮೇಲೆ ಇನ್ನು ಮುಂದೆ ನೋಂದಾಯಿತ ಅಂಚೆ(Register post/RPAD) ಎಂಬುದರ ಬದಲಾಗಿ ತುರ್ತು ಅಂಚೆ(Speed Post) ಎಂದು ನಮೂದಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular