ಗುಜರಾತ್‌ನ ವಡೋದರಾದ ಛಾಣಿ ಪ್ರದೇಶದಲ್ಲಿರುವ ರೆಡ್ ರೋಸ್ ಹೋಟೆಲ್‌ನಲ್ಲಿ ಮಹಿಳೆಯೊಬ್ಬರು ತಂಗಿದ್ದಾಗ, ಅವರ ಗೈರುಹಾಜರಿಯಲ್ಲಿ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಒಳಗೆ ಪ್ರವೇಶಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ತಮ್ಮ ಮೀಟಿಂಗ್ ಮುಗಿಸಿ ವಾಪಸ್ ಬಂದಾಗ ಈ ವಿಷಯ ತಿಳಿದಿದ್ದು, ಹೋಟೆಲ್ ಸಿಬ್ಬಂದಿಯ ಈ ನಡೆಯನ್ನು ತೀವ್ರವಾಗಿ ಖಂಡಿಸಿ ವೀಡಿಯೋ ಹಂಚಿಕೊಂಡಿದ್ದಾರೆ. ಈ ಘಟನೆಯು ಹೋಟೆಲ್‌ಗಳಲ್ಲಿ ಗ್ರಾಹಕರ ಭದ್ರತೆ ಮತ್ತು ಗೌಪ್ಯತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಅವರು ತಮ್ಮ ಕೆಲಸದ ಸಂಬಂಧ ಹೊರಗೆ ಹೋಗುವಾಗ ರೂಮ್ ಅನ್ನು ಲಾಕ್ ಮಾಡಿ, ಎಲ್ಲಾ ವೈಯಕ್ತಿಕ ವಸ್ತುಗಳನ್ನು ಒಳಗಡೆಯೇ ಇಟ್ಟು ಹೋಗಿದ್ದರು. ವಾಪಸ್ ಬಂದಾಗ ಕೊಠಡಿಯಲ್ಲಾದ ಸಣ್ಣ ಬದಲಾವಣೆಗಳು ಮತ್ತು ವಾಸನೆಯಿಂದ ಯಾರೋ ಒಳಗೆ ಬಂದಿರುವುದು ಅವರ ಗಮನಕ್ಕೆ ಬಂದಿದೆ. ಅನುಮಾನಗೊಂಡು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಗ್ರಾಹಕರ ಗಮನಕ್ಕೆ ತರದೆ ಮಾಸ್ಟರ್ ಕೀ ಬಳಸಿ ಕೊಠಡಿ ತೆರೆದಿರುವುದು ನಿಜವೆಂದು ತಿಳಿದುಬಂದಿದೆ.
ಘಟನೆ ಕುರಿತು ಹೋಟೆಲ್ ಆಡಳಿತ ಮಂಡಳಿ ಕ್ಷಮೆಯಾಚಿಸಿದ್ದು, ಮಳೆಯ ನೀರು ಕೊಠಡಿಯೊಳಗೆ ಬಂದಿದ್ದರಿಂದ ಹೋಟೆಲ್ ಆಸ್ತಿಗೆ ಹಾನಿಯಾಗಬಾರದೆಂಬ ಕಾರಣಕ್ಕೆ ಒಳಗೆ ಹೋಗಬೇಕಾಯಿತು ಎಂದು ಸಮಜಾಯಿಷಿ ನೀಡಿದೆ. ಅಲ್ಲದೆ, ಕೊಠಡಿ ಪ್ರವೇಶಿಸುವ ಮೊದಲು ಗ್ರಾಹಕರಿಗೆ ಕರೆ ಮಾಡಿ ಮಾಹಿತಿ ನೀಡಬೇಕಿತ್ತು ಎಂದು ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ, ಹೋಟೆಲ್‌ನ ಈ ಸ್ಪಷ್ಟನೆಯನ್ನು ಮಹಿಳೆ ತಿರಸ್ಕರಿಸಿದ್ದು, “ಅತ್ಯಂತ ತುರ್ತು ಪರಿಸ್ಥಿತಿಯಿದ್ದರೂ ಒಮ್ಮೆ ಫೋನ್ ಮಾಡಿ ಅನುಮತಿ ಪಡೆಯಬೇಕಿತ್ತು. ಬರೀ ಕ್ಷಮೆಯಿಂದ ನನ್ನ ಆತ್ಮಗೌರವ ಹಾಗೂ ಗೌಪ್ಯತೆಗೆ ಆದ ಧಕ್ಕೆಯನ್ನು ಸರಿದೂಗಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ನೆಟ್ಟಿಗರು ಹೋಟೆಲ್ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಬಳಕೆದಾರರು ತಮಗೂ ಹಿಂದೆ ಇಂತಹ ಅನುಭವಗಳಾಗಿದ್ದನ್ನು ಹಂಚಿಕೊಳ್ಳುತ್ತಿದ್ದು, ಗ್ರಾಹಕರು ಇಲ್ಲದ ಸಮಯದಲ್ಲಿ ಮಾಸ್ಟರ್ ಕೀ ಬಳಸಿ ರೂಮ್ ತೆರೆಯುವುದು ಖಾಸಗಿತನದ ಮೇಲಿನ ಅತಿಕ್ರಮಣ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
https://www.instagram.com/reel/DbltojLS3Rx
A girl booked a room at a hotel in Hyderabad and paid for it in full. She stayed there for some time, then locked the room and went out for an important meeting.
While she was away, the hotel staff used a master key to open her room without her permission. They allowed another… pic.twitter.com/4BJGhJJfTF
— Bharat Mata ke Sewak (@CountryGulshan) August 5, 2026

