HomeEntertainment'ಕೆರೆಬೇಟೆ' ಚಿತ್ರದ ಮೆಲೋಡಿ ಹಾಡು ರಿಲೀಸ್

‘ಕೆರೆಬೇಟೆ’ ಚಿತ್ರದ ಮೆಲೋಡಿ ಹಾಡು ರಿಲೀಸ್

ಗೌರಿಶಂಕರ್ ಅಭಿನಯದ ‘ಕೆರೆಬೇಟೆ’ ಚಿತ್ರ ಇದೆ ಮಾರ್ಚ್ 15ಕ್ಕೆ ರಾಜ್ಯದ್ಯಂತ ತೆರೆ ಕಾಣಲಿದ್ದು, ಈಗಾಗಲೇ ತನ್ನ ಹಳ್ಳಿ ಸೊಗಡಿನ ಹಾಡುಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದೆ. ಯೂಟ್ಯೂಬ್ ನಲ್ಲಿ ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಸುಂದರ ಸಾಲುಗಳುಳ್ಳ ಮೆಲೋಡಿ ಹಾಡನ್ನು  ಬಿಡುಗಡೆ ಮಾಡಲಾಗಿದೆ. ಸಿದ್ದಾರ್ಥ್ ಬೆಲ್ಮಣ್ಣು ಈ ಹಾಡಿಗೆ ಧ್ವನಿಯಾಗಿದ್ದು, ಪ್ರಮೋದ್ ಮರವಂತೆ ಸಾಹಿತ್ಯವಿದೆ.

ರಾಜ್ ಗುರು ನಿರ್ದೇಶನದ ಈ ಚಿತ್ರವನ್ನು ಜನಮನ ಸಿ ನಿಮಾಸ್ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗೌರಿಶಂಕರ್ ಸೇರಿದಂತೆ ಬಿಂದು ಶಿವರಾಂ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಗೋಪಾಲ್ ದೇಶಪಾಂಡೆ, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್ ಬಣ್ಣ ಹಚ್ಚಿದ್ದಾರೆ.

ಡಿಫ್ರೆಂಟ್ ಡ್ಯಾನಿ ಮತ್ತು ಟೈಗರ್ ಶಿವು ಸಾಹಸ ನಿರ್ದೇಶನವಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular