HomeIndiaಈ ಅಜ್ಜಿ ಓಡಿಸದಿರುವ ವಾಹನವೇ ಇಲ್ಲ....! ಹುಬ್ಬೇರಿಸುವಂತಿದೆ ವಿಡಿಯೋ

ಈ ಅಜ್ಜಿ ಓಡಿಸದಿರುವ ವಾಹನವೇ ಇಲ್ಲ….! ಹುಬ್ಬೇರಿಸುವಂತಿದೆ ವಿಡಿಯೋ

ಮಹಿಳೆಯರು ಕಾರು ಓಡಿಸೋದು ಈಗ ಮಾಮೂಲಿ ಸಂಗತಿ. ವಯಸ್ಸಾದ ಮಹಿಳೆಯರು ಕೂಡ ಕಾರ್‌ ಹೊಡಿತಾರೆ. ಆದ್ರೆ 73 ವರ್ಷದ ಕೇರಳದ ಮಹಿಳೆ ಇದ್ರಲ್ಲಿಯೇ ಸಾಧನೆ ಮಾಡಿದ್ದಾರೆ. ಅವರು ಓಡಿಸಿದ್ದು ಸಾಮಾನ್ಯ ಕಾರನ್ನಲ್ಲ. ಜಾಗ್ವಾರ್ ಎಫ್ ಮಾದರಿಯ ಸ್ಪೋರ್ಟ್ಸ್ ಕಾರನ್ನು ಓಡಿಸಿ, ಎಲ್ಲರು ಬೆರಗಾಗುವಂತೆ ಮಾಡಿದ್ದಾರೆ.

ಅವರು ಜಾಗ್ವಾರ್ ಎಫ್ ಮಾದರಿಯ ಸ್ಪೋರ್ಟ್ಸ್ ಕಾರ್‌ ಓಡಿಸಿದ ವಿಡಿಯೋ ವೈರಲ್‌ ಆಗಿದೆ. ಕೇರಳದ 73 ವರ್ಷದ ರಾಧಾಮಣಿ ಅಜ್ಜಿಯನ್ನು ಭೇಟಿ ಮಾಡಿ, ಅವರು ಸಾಂಪ್ರದಾಯಿಕ ಕಾರುಗಳನ್ನು ತ್ಯಜಿಸಿ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರನ್ನು ಓಡಿಸಿದ್ದಾರೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೀಡಿಯೊದಲ್ಲಿ  ಅಜ್ಜಿ ನಗುತ್ತಾ, ಹಸಿರು ಸ್ಪೋರ್ಟ್ಸ್ ಕಾರನ್ನು ಓಡಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು angoori_babe ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೇಗವಾಗಿ ವೈರಲ್‌ ಆಗಿದ್ದು, 23 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಜ್ಜಿ ಬರೀ ಸ್ಫೋರ್ಟ್ಸ್‌ ಕಾರನ್ನು ಮಾತ್ರವಲ್ಲ ಟ್ರಕ್‌ ಕೂಡ ಓಡಿಸ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular