ಡಿಜಿಟಲ್ ಡೆಸ್ಕ್ : ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ್ದು, ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ.
ಎಂಬಿಬಿಎಸ್ ವಿದ್ಯಾರ್ಥಿ ಆಶ್ರಿತ್ ವಿಯೆಟ್ನಾಂನಲ್ಲಿ ಮೃತಪಟ್ಟಿದ್ದಾರೆ. ಬಟ್ಟೆ ವ್ಯಾಪಾರಿ ಅರ್ಷಿದ್ ಅರ್ಜುನ್-ಪ್ರತಿಮಾ ಅವರ ಮಗ ಅರ್ಷಿದ್ ಆಶ್ರಿತ್ (21) ವಿಯೆಟ್ನಾಂನ ಕ್ಯಾನ್ ಥೋ ನಗರದಲ್ಲಿ ಎಂಬಿಬಿಎಸ್ನ ಮೂರನೇ ವರ್ಷದಲ್ಲಿ ಓದುತ್ತಿದ್ದರು.
150 ಸಿಸಿ ಬೈಕ್ನಲ್ಲಿ ಸ್ನೇಹಿತನ ಜೊತೆ ಹೋಗುತ್ತಿದ್ದ ಆಶ್ರಿತ್ ಅತಿ ವೇಗದಲ್ಲಿ ಬೈಕ್ ಚಲಾಯಿಸಿ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದರು, ಪರಿಣಾಮ ಆಶ್ರಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡರು. ಘಟನೆಯ ಬಗ್ಗೆ ಪೋಷಕರು ಕಣ್ಣೀರಿಟ್ಟಿದ್ದಾರೆ.

