HomeLatest NewsBIG NEWS: ನಿವೃತ್ತ ನರ್ಸ್ ಎಡವಟ್ಟು: ತಾಯಿ-ನವಜಾತ ಶಿಶು ಇಬ್ಬರೂ ಸಾವು

BIG NEWS: ನಿವೃತ್ತ ನರ್ಸ್ ಎಡವಟ್ಟು: ತಾಯಿ-ನವಜಾತ ಶಿಶು ಇಬ್ಬರೂ ಸಾವು

ಕಲಬುರಗಿ: ನಿವೃತ್ತ ನರ್ಸ್ ಎಡವಟ್ಟಿನಿಂದಾಗಿ ತಾಯಿ ಹಾಗೂ ನವಜಾತ ಶಿಶು ಬಲಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಅಲೂಕಿನ ವಾಡಿ ಗ್ರಾಮದಲ್ಲಿ ನಡೆದಿದೆ.

ಇಂಗಳಿ ಗ್ರಾಮದ ಶ್ರೀದೇವಿ ಪ್ರಭಾಕರ್ (28) ಹಾಗೂ ನವಜಾತ ಶಿಶು ಮೃತಪಟ್ಟವರು. ನಿವೃತ್ತ ನರ್ಸ್ ಗಂಗೂಬಾಯಿ ಬಳಿ ಹೆರಿಗೆಗೆಂದು ಮಹಿಳೆ ದಾಅಖಲಾಗಿದ್ದಳು. ಹೆರಿಗೆ ಬಳಿಕ ತಾಯಿ-ಮಗು ಇಬ್ಬರು ಸಾವನ್ನಪ್ಪಿದ್ದಾರೆ. ನರ್ಸ್ ನಿರ್ಲಕ್ಶ್ಯಕ್ಕೆ ತಾಯಿ ಮಗು ಇಬ್ಬರು ಬಲಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಶ್ರೀದೇವಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳು ಇದ್ದರು. ಈಬಾರಿ ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲಿ ಘಟನೆ ನಡೆದಿದೆ. ನರ್ಸ್ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಶ್ರೀದೇವಿ ಪತಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular