ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಮೇಣದ ಪ್ರತಿಮೆಯಿಂದ ಹಿಡಿದು ಹಲವಾರು ಬಗೆಯಲ್ಲಿ ಕ್ರೀಡಾಪ್ರೇಮಿಗಳು ಅಭಿಮಾನ ಮೆರೆದಿದ್ದಾರೆ. ಈಗ ಇವರ ಅಭಿಮಾನಿಯೊಬ್ಬ ಪೇಂಟಿಂಗ್ ಮಾಡಿದ್ದು, ಅದೀಗ ಗಮನ ಸೆಳೆದಿದೆ.
ಮೊದಲ ನೋಟದಲ್ಲಿ, ಇದು ಕ್ರಿಕೆಟಿಗನ ಛಾಯಾಚಿತ್ರದಂತೆ ಕಾಣುತ್ತದೆ. ಇದರಲ್ಲಿ ವಿರಾಟ್ ಕೊಹ್ಲಿ ಬಿಳಿ ಶರ್ಟ್ ಧರಿಸಿ ಕಪ್ಪು ಹಿನ್ನೆಲೆಯಲ್ಲಿ ನಿಂತಿದ್ದಾರೆ. ಅವರ ಕೂದಲು ಮತ್ತು ಮುಖದ ವೈಶಿಷ್ಟ್ಯಗಳನ್ನು ಸುಂದರವಾಗಿ ಚಿತ್ರದಲ್ಲಿ ವಿವರಿಸಲಾಗಿದೆ.
ಈ ಪೇಂಟಿಂಗ್ ಅನ್ನು ಬಳಕೆದಾರ WG RumblePants ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ನಂತರ, ಪೋಸ್ಟ್ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಎರಡು ಸಾವಿರ ಇಷ್ಟಗಳನ್ನು ಸಂಗ್ರಹಿಸಿದೆ. ಖುದ್ದು ವಿರಾಟ್ ಕೊಹ್ಲಿ ಅವರೂ ಶೇರ್ ಮಾಡಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
I have to admit, I’ve been overwhelmed by the reaction to the Ashwin painting.
THANK YOU SO MUCH to everyone who shared it or left comments. So many people have been so very kind.
And for all my new Indian followers, here’s an old favourite. pic.twitter.com/pIfpgThkgz
— WG RumblePants (@WG_RumblePants) February 19, 2023
And here’s the chap in question taking a look at it. pic.twitter.com/UhZHSYVfvJ
— WG RumblePants (@WG_RumblePants) February 19, 2023


)