ಬೆಂಗಳೂರು: ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಪತಿ ವಿರುದ್ಧ ಬೆತ್ತಲೆ ಓಡಾಟ, ವಿಕೃತ ಹಿಂಸೆ ಆರೋಪ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಹಿಳೆಯ ವಿರುದ್ಧವೇ ಮೂರನೇಯ ಪತಿ ಆರೋಪ ಮಾಡಿದ್ದು, ಹಣಕ್ಕಾಗಿ ಮದುವೆ ನಾಟಕವಾಗಿ ವಂಚಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಮೇಘಶ್ರೀ ಎಂಬ ಮಹಿಳೆ ಕೆಲ ದಿನಗಳ ಹಿಂದೆ ಪತಿ ಮಂಜುನಾಥ್ ವಿರುದ್ಧ ಕಿರುಕುಳ, ಹಲ್ಲೆ, ತನ್ನ ತಂದೆ-ತಾಯಿಗೂ ಜೀವಬೆದರಿಕೆ ಹಾಕಿರುವ ಆರೋಪ ಮಾಡಿದ್ದರು. ಅಲ್ಲದೇ ಪತಿ ಮಂಜುನಾಥ್ ವಿಕೃತ ವ್ಯಕ್ತಿ. ಬೆತ್ತಲಾಗಿ ಓಡಾಡುವುದು ತನಗೆ ಹಿಂಸಿಸುವುದು ಮಾಡುತ್ತಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಪತಿ ಮಂಜುನಾಥ್ ಮೇಘಶ್ರೀ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮೇಘಶ್ರೀ ಈಗಾಗಲೇ ಒಂದು ಮದುವೆಯಾಗಿ ಆತನನ್ನು ಬಿಟ್ಟು, ಎರಡನೇಯ ಮದುವೆಯಾಗಿದ್ದು, ಆತನಿಗೂ ಕೈಕೊಟ್ಟು ತನ್ನನ್ನು ತೋರಿಕೆಗೆ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದ ಮೇಘಶ್ರೀ ಜೊತೆ ಸ್ನೇಹ ಬೆಳೆದು ಮದುವೆ ಮಾತುಕತೆವರೆಗೂ ಬಂದಿದೆ. ಮಂಜುನಾಥ್ ಮೇಘಶ್ರೀಗೆ ಮದುವೆಯಾಗುವಂತೆ ಹೇಳಿದರೆ ಆಕೆ ದೇವಸ್ಥಾನದಲ್ಲಿ ಸಿಂಪಲ್ ಆಗಿ ಆಗೋಣ ಎಂದಿದ್ದಳಂತೆ. ಬಳಿಕ ಜೊತೆಯಲ್ಲಿ ಇದ್ದೆವು. ಅಧಿಕ್ರಿತವಾಗಿ ಮದುವೆಯಾಗದಿದ್ದರು ಗಂಡ ಎಂದು ಹೇಳಿಕೊಂಡೇ ಓಡಾಡುತ್ತಿದ್ದಳು. ಅಲ್ಲದೇ ಆಕೆ ಇರುವ ಲೀಸ್ ಮನೆಗಾಗಿ 12 ಲಕ್ಷ ಹಣ ಖರ್ಚು ಮಾಡಿದ್ದೇನೆ. ತನ್ನಿಂದ ಲಕ್ಷ ಲಕ್ಷ ಹಣ ಪಡೆದಿದ್ದಾಳೆ. ಈಗ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ನಾಲ್ಕನೇ ಮದುವೆಗೆ ಸಿದ್ಧಳಾಗಿದ್ದಾಳೆ. ಬೇರೊಬ್ಬನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಹಣಕ್ಕಾಗಿ ಮದುವೆಯಾಗಿ ಮೋಸ ಮಾಡುವುದೇ ಆಕೆಯ ಕೆಲಸ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಮೇಘಶ್ರೀ ವಿರುದ್ಧ ಮೂರನೇ ಪತಿ ಮಂಜುನಾಥ್ ದೂರು ನೀಡಿದ್ದಾರೆ.

