HomeKarnatakaSHOCKING: ಅಂತರ್ಜಾತಿ ವಿವಾಹವಾದ ಯುವತಿ ಹತ್ಯೆ: ಸೊಸೆ ದಲಿತಳೆಂದು ಗಂಡನ ಮನೆಯವರಿಂದಲೇ ಘೋರ ಕೃತ್ಯ

SHOCKING: ಅಂತರ್ಜಾತಿ ವಿವಾಹವಾದ ಯುವತಿ ಹತ್ಯೆ: ಸೊಸೆ ದಲಿತಳೆಂದು ಗಂಡನ ಮನೆಯವರಿಂದಲೇ ಘೋರ ಕೃತ್ಯ

ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವತಿಯನ್ನು ಹತ್ಯೆ ಮಾಡಲಾಗಿದೆ. ಗಂಡನ ಮನೆಯವರು ಸೊಸೆ ದಲಿತಳೆಂದು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದು, ಗಂಗಾವತಿ ತಾಲೂಕಿನ ವಿಠಲಾಪುರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗೋಲಿ ಗ್ರಾಮದ ಮರಿಯಮ್ಮ(21) ಮೃತ ಯುವತಿ. ವಿಠಲಾಪುರದಲ್ಲಿರುವ ಅಜ್ಜಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಮರಿಯಮ್ಮನಿಗೆ ಅದೇ ಗ್ರಾಮದ ನಾಯಕ ಸಮುದಾಯದ ಯುವಕ ಹನುಮಯ್ಯನ ಪರಿಚಯವಾಗಿದೆ. ಎರಡು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕುಟುಂಬದವರನ್ನು ಒಪ್ಪಿಸಿ 2023ರ ಏಪ್ರಿಲ್ ನಲ್ಲಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು.

ಮದುವೆಗೆ ಒಪ್ಪಿದ್ದ ಯುವಕನ ಕುಟುಂಬದವರು ಮನೆಗೆ ಮರಿಯಮ್ಮ ಅವರನ್ನು ಸೇರಿಸಿಕೊಳ್ಳದೆ ಬೇರೆ ಶೆಡ್ ನಲ್ಲಿ ವಾಸವಾಗಿರಲು ಸೂಚಿಸಿದ್ದರು. ಆಕೆ ಮಾಡಿದ ಅಡುಗೆಯನ್ನು ತಿನ್ನುತ್ತಿರಲಿಲ್ಲ. ಕುಟುಂಬದಿಂದ ದೂರ ಇಟ್ಟು ಹಿಂಸೆ ನೀಡುತ್ತಿದ್ದರು. ಆಗಸ್ಟ್ 29ರಂದು ಮರಿಯಮ್ಮಳನ್ನು ಮನಬಂದಂತೆ ಥತಿಳಿಸಿ ಅನುಮಾನ ಬಾರದಂತೆ ವಿಷ ಉಣ್ಣಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹನುಮಯ್ಯನ ಕುಟುಂಬದ 13 ಮಂದಿ ವಿರುದ್ಧ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular