HomeKarnatakaBIG NEWS: ಮಾರ್ಕಾಂಡೇಯ ನದಿಗೆ ಬಿದ್ದ ಬೈಕ್: ಈಜಿ ದಡ ಸೇರಿದ ಓರ್ವ; ಮತ್ತೋರ್ವ ನಾಪತ್ತೆ

BIG NEWS: ಮಾರ್ಕಾಂಡೇಯ ನದಿಗೆ ಬಿದ್ದ ಬೈಕ್: ಈಜಿ ದಡ ಸೇರಿದ ಓರ್ವ; ಮತ್ತೋರ್ವ ನಾಪತ್ತೆ

ಬೆಳಗಾವಿ: ಭಾರಿ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೈಕ್ ವೊಂದು ಸವಾರನ ನಿಯಂತ್ರಣ ತಪ್ಪಿ ಮಾರ್ಕಾಂಡೇಯ ನದಿಗೆ ಬಿದ್ದ ಘಟನೆ ಬೆಳಗವಿ ಜಿಲ್ಲೆಯ ಕಂಗ್ರಾಳಿ ಬಳಿ ನಡೆದಿದೆ.

ತುಂಬಿ ಹರಿಯುತ್ತಿದ್ದ ನದಿಗೆ ಬೈಕ್ ಬಿದ್ದಿದ್ದು, ಓರ್ವನನ್ನು ರಕ್ಷಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ನಪತ್ತೆಯಾಗಿದ್ದಾನೆ.

ಜ್ಯೋತಿನಾಥ್ ಪಾಟೀಲ ನದಿಯಲ್ಲಿ ಈಜಿ ದಡ ಸೇರಿದ್ದು, ಆತನನ್ನು ರಕ್ಷಿಸಲಾಗಿದೆ. ಓಂಕಾರ ಅರುಣ ಪಾಟೀಲ್ (23) ನಾಪತ್ತೆಯಾಗಿರುವ ಯುವಕ. ನಾಪತ್ತೆಯಾಗಿರುವ ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಗ್ರಾಳಿ ಬಳಿಯ ಮಾರ್ಕಾಂಡೇಯ ನದಿಯಲ್ಲಿ ಶೋಧ ಕಾರ್ಯ ಚುರುಕುಗೊಂಡಿದೆ.

 

For Latest News Updates, Join Our Whatsapp Community🚩
RELATED ARTICLES

Most Popular