HomeIndiaBIG NEWS: ನಟಿ ಊರ್ಮಿಳಾ ಕಾರು ಭೀಕರ ಅಪಘಾತ: ಕಾರ್ಮಿಕರ ಮೇಲೆ ಹರಿದ ಕಾರು; ಓರ್ವ...

BIG NEWS: ನಟಿ ಊರ್ಮಿಳಾ ಕಾರು ಭೀಕರ ಅಪಘಾತ: ಕಾರ್ಮಿಕರ ಮೇಲೆ ಹರಿದ ಕಾರು; ಓರ್ವ ಸ್ಥಳದಲ್ಲೇ ಸಾವು; ಇನ್ನೋರ್ವನ ಸ್ಥಿತಿ ಗಂಭೀರ

ಮುಂಬೈ: ಮರಾಠಿ ಖ್ಯಾತ ನಟಿ ಊರ್ಮಿಳಾ ಕಾರು ಅಪಘಾತಕ್ಕೀಡಾಗಿದ್ದು, ಮೆಟ್ರೋ ಕಾರ್ಮಿಕರ ಮೇಲೆ ಹರಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನ ಕಂಡಿವಲಿಯಲ್ಲಿ ನಡೆದಿದೆ.

ನಟಿ ಊರ್ಮಿಳಾ ಚಿತ್ರೀಕರಣ ಮುಗಿಸಿ ಹಿಂತಿರುಗುತ್ತಿದ್ದಗ ಮೆಟ್ರೋ ರೈಲಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದಿದ್ದು, ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ನಟಿ ಊರ್ಮಿಳಾ ಹಾಗೂ ಕಾರಿನ ಚಾಲಕ ಕೂಡ ಗಾಯಗೊಂಡಿದ್ದಾರೆ.

ಗಾಯಾಳುಗಲನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಅತಿವೇಗವಾಗಿ ಚಲಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಟಿ ಊರ್ಮಿಳಾ ಮರಾಠಿಯ ದುನಿಯಾದಾರಿ, ಹಿಂದಿಯ ಥ್ಯಾಂಕ್ ಗಾಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular