HomeLatest Newsಭಾರತೀಯ ಶೂಟಿಂಗ್ ಲೋಕದ ಧ್ರುವತಾರೆ ಅಸ್ತಂಗತ :ಒಲಿಂಪಿಕ್ ಹೀರೊ ಮನು ಭಾಕರ್ ಕೋಚ್ ಜಸ್ಪಾಲ್ ರಾಣಾ...

ಭಾರತೀಯ ಶೂಟಿಂಗ್ ಲೋಕದ ಧ್ರುವತಾರೆ ಅಸ್ತಂಗತ :ಒಲಿಂಪಿಕ್ ಹೀರೊ ಮನು ಭಾಕರ್ ಕೋಚ್ ಜಸ್ಪಾಲ್ ರಾಣಾ ನಿಧನ

ನವದೆಹಲಿ: ಭಾರತೀಯ ಕ್ರೀಡಾಲೋಕ ಸಾರ್ವಕಾಲಿಕ ಆಘಾತಕ್ಕೆ ಒಳಗಾಗಿದೆ ದೇಶ ಹೆತ್ತ ಹೆಮ್ಮೆಯ ಶೂಟಿಂಗ್ ದಂತಕಥೆ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ತರಬೇತುದಾರ ಜಸ್ಪಾಲ್ ರಾಣಾ (Jaspal Rana) ಅವರು ಶುಕ್ರವಾರ (ಜೂನ್ 12) ಮುಂಜಾನೆ ತಮ್ಮ 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು ವಾರದಿಂದ ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಅವರು ನವದೆಹಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಭಾರತೀಯ ರಾಷ್ಟ್ರೀಯ ರೈಫಲ್ ಸಂಘ (NRAI) ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದೆ.ಮನು ಭಾಕರ್ ಅವರಂತಹ ಒಲಿಂಪಿಕ್ ವೀರರನ್ನು ದೇಶಕ್ಕೆ ನೀಡಿದ ಈ ಮಹಾ ಗುರುವಿನ ಹಠಾತ್ ನಿಧನ ಇಡೀ ಭಾರತೀಯ ಕ್ರೀಡಾ ಜಗತ್ತನ್ನು ಕಣ್ಣೀರಲ್ಲಿ ಮುಳುಗಿಸಿದೆ

ವಿಮಾನದಲ್ಲೇ ಕಾಡಿದ್ದ ಎದೆನೋವು ಅಸಿಡಿಟಿ ಅಂದುಕೊಂಡು ಮಾಡಿದ್ದೇ ದೊಡ್ಡ ತಪ್ಪು

ಜಸ್ಪಾಲ್ ರಾಣಾ ಅವರ ಸಾವಿನ ಹಿಂದಿನ ಆಘಾತಕಾರಿ ಹಿನ್ನೆಲೆ ಈಗ ಬೆಳಕಿಗೆ ಬಂದಿದೆ.ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ (ISSF) ವಿಶ್ವಕಪ್ ವೇಳೆ ಜಸ್ಪಾಲ್ ರಾಣಾ ಅವರಿಗೆ ಮೊದಲು ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಅವರು ಅದನ್ನು ಕೇವಲ ಅಸಿಡಿಟಿ (Acidity) ಇರಬಹುದು ಎಂದು ನಿರ್ಲಕ್ಷಿಸಿ ತಮ್ಮ ಪ್ರವಾಸ ಮುಂದುವರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಜರ್ಮನಿಯಿಂದ ಭಾರತಕ್ಕೆ ವಾಪಸ್ ಬರುವ ವೇಳೆ ವಿಮಾನ ಪ್ರಯಾಣದ ಸಮಯದಲ್ಲೂ ಅವರಿಗೆ ಮತ್ತೆ ಭೀಕರವಾಗಿ ಎದೆನೋವು ಕಾಣಿಸಿಕೊಂಡಿದೆ. ದೆಹಲಿ ತಲುಪಿದ ತಕ್ಷಣ ಅವರನ್ನು ತುರ್ತಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ (Blockage) ಇರುವುದು ಪತ್ತೆಯಾಗಿತ್ತು. ತಕ್ಷಣವೇ ಸ್ಟೆಂಟ್ ಅಳವಡಿಸಿ ಆಪರೇಷನ್ ಮಾಡಲಾಗಿತ್ತು. ಇನ್ನೊಂದು ಸ್ಟೆಂಟ್ ಅಳವಡಿಸುವ ಪ್ರಕ್ರಿಯೆ ನಡೆಯುವಷ್ಟರಲ್ಲೇ ಚಿಕಿತ್ಸೆ ಫಲಕಾರಿಯಾಗದೆ ರಾಣಾ ಇಹಲೋಕ ತ್ಯಜಿಸಿದ್ದಾರೆ

ಮನು ಭಾಕರ್ ಯಶಸ್ಸಿನ ಹಿಂದಿದ್ದ ಅಸಲಿ ಚಾಣಕ್ಯ

ಒಲಿಂಪಿಕ್ ಇತಿಹಾಸ: ಇತ್ತೀಚೆಗೆ ನಡೆದ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಪಿಸ್ತೂಲ್ ಶೂಟರ್ ಮನು ಭಾಕರ್ (Manu Bhaker) ಮಹಿಳೆಯರ 10 ಮೀ ಏರ್ ಪಿಸ್ತೂಲ್ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಬರೋಬ್ಬರಿ ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಮನು ಭಾಕರ್ ಅವರ ವೃತ್ತಿಜೀವನದ ಆ ಕಠಿಣ ಹಂತದಲ್ಲಿ ಬೆನ್ನಿಗೆ ಬಂಡೆಯಂತೆ ನಿಂತು ತಯಾರಿ ನಡೆಸಿದ್ದವರೇ ಈ ಜಸ್ಪಾಲ್ ರಾಣಾ

ಯುವ ಪೀಳಿಗೆಯ ರೂವಾರಿ: ಮನು ಭಾಕರ್ ಮಾತ್ರವಲ್ಲದೆ ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಅವರಂತಹ ವಿಶ್ವದರ್ಜೆಯ ಶೂಟರ್‌ಗಳನ್ನು ಭಾರತಕ್ಕೆ ಪರಿಚಯಿಸಿದ ಕೀರ್ತಿ ರಾಣಾ ಅವರಿಗೆ ಸಲ್ಲುತ್ತದೆ. ಜೂನಿಯರ್ ಮಟ್ಟದಲ್ಲಿ ಅವರು ನೀಡಿದ ಅದ್ಭುತ ಕೊಡುಗೆಗಾಗಿ ಸರ್ಕಾರ ಇವರಿಗೆ 2020ರಲ್ಲಿ ದೇಶದ ಅತ್ಯುನ್ನತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

18ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದಿದ್ದ ಶೂಟಿಂಗ್ ಸಿಂಹ

ಜಸ್ಪಾಲ್ ರಾಣಾ ಕೇವಲ ಕೋಚ್ ಆಗಿ ಮಾತ್ರವಲ್ಲ, ಒಬ್ಬ ಅಥ್ಲೀಟ್ ಆಗಿಯೂ ಭಾರತದ ಅತಿ ದೊಡ್ಡ ಮುತ್ತಾಗಿದ್ದರು:

1990 ರ ದಶಕದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸಿದ್ದ ರಾಣಾ, ಕೇವಲ 18ನೇ ವಯಸ್ಸಿನಲ್ಲಿ (1994 ರಲ್ಲಿ) ಮಿಲಾನ್ ವಿಶ್ವ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆ (World Record) ಬರೆದಿದ್ದರು

1994, 1998, 2002 ಮತ್ತು 2006ರ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತದ ಪರ ಸಾಲು ಸಾಲು ಚಿನ್ನದ ಪದಕಗಳನ್ನು ಬೇಟೆಯಾಡಿ ದೇಶದಲ್ಲಿ ಶೂಟಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸಿದ ಧ್ರುವತಾರೆ ಇವರಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular