HomeLatest NewsBREAKING : ಬೆಂಗಳೂರಲ್ಲಿ ಘೋರ ದುರಂತ : ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವ್ಯಕ್ತಿ ಸಾವು

BREAKING : ಬೆಂಗಳೂರಲ್ಲಿ ಘೋರ ದುರಂತ : ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವ್ಯಕ್ತಿ ಸಾವು

ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಆಶ್ರಯ ನಗರ ನಿವಾಸಿ ಪುಟ್ಟಸ್ವಾಮಿ ಮೃತ ವ್ಯಕ್ತಿ. ಆಂಥೋನಿ ಎಂಬುವವರ ಜೊತೆ ಪುಟ್ಟಸ್ವಾಮಿ ಮ್ಯಾನ್ ಹೋಲ್ ಗೆ ಇಳಿದು ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ್ದರು. ಸುಮಾರು ಒಂದುಗಂಟೆ ಕಾಲ ಒಳಚರಂಡಿಗೆ ಇಳಿದು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಈ ವೇಳೆ ಉಸಿರುಗಟ್ಟಿದಂತಾಗುತ್ತಿದೆ ಎಂದು ಇಬ್ಬರೂ ಹೊರಬಂದಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಮನೆಗೆ ತೆರಳಿದ್ದರು.

ಮನೆಗೆ ಬಂದು ಕೆಲ ಸಮಯದ ಬಳಿಕ ಪುಟ್ಟಸ್ವಾಮಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಆರ್ ಎಂಸಿ ಯಾರ್ಡ್ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular