HomeRecipiesಬೇಸಿಗೆಯ ಊಟಕ್ಕೆ ಸೂಪರ್ ಕಾಂಬಿನೇಷನ್: ನಾಲಿಗೆಯಲ್ಲಿ ನೀರೂರಿಸುವ ಮಾವಿನಕಾಯಿ ಪುದೀನಾ ಚಟ್ನಿ

ಬೇಸಿಗೆಯ ಊಟಕ್ಕೆ ಸೂಪರ್ ಕಾಂಬಿನೇಷನ್: ನಾಲಿಗೆಯಲ್ಲಿ ನೀರೂರಿಸುವ ಮಾವಿನಕಾಯಿ ಪುದೀನಾ ಚಟ್ನಿ

ಬೇಸಿಗೆ ಕಾಲ ಬಂತೆಂದರೆ ಸಾಕು ಪ್ರತಿಯೊಬ್ಬರ ಮನೆಯಲ್ಲೂ ಮಾವಿನಕಾಯಿ ಅಡುಗೆಗಳದ್ದೇ ಕಾರುಬಾರು. ಅದರಲ್ಲೂ ಮಧ್ಯಾಹ್ನದ ಬಿಸಿ ಬಿಸಿ ಅನ್ನದ ಜೊತೆಗೆ ಅಥವಾ ಸಜೆ ಸಂಜೆಯ ಸ್ನಾಕ್ಸ್ ಜೊತೆಗೆ ನೆಂಚಿಕೊಳ್ಳಲು ಮಾವಿನಕಾಯಿ ಚಟ್ನಿ ಇದ್ದರೆ ಅದರ ಮಜಾವೇ ಬೇರೆ. ಕಚ್ಚಾ ಮಾವಿನಕಾಯಿ, ಹಸಿರು ಪುದೀನಾ ಮತ್ತು ಬೆಳ್ಳುಳ್ಳಿ ಬಳಸಿ ಮಾಡುವ ಈ ಚಟ್ನಿ ನಾಲಿಗೆಗೆ ಹೊಸ ರುಚಿ ನೀಡುವುದಲ್ಲದೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದನ್ನು ಮಾಡುವುದು ಹೇಗೆ ಎಂಬ ಸರಳ ವಿಧಾನ ಇಲ್ಲಿದೆ.

ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು

  • ಹಸಿ ಮಾವಿನಕಾಯಿ – ೧ (ಚಿಕ್ಕದಾಗಿ ಹೆಚ್ಚಿಟ್ಟುಕೊಂಡಿದ್ದು)
  • ಪುದೀನಾ ಎಲೆಗಳು – ೧ ಕಪ್
  • ಹಸಿರು ಮೆಣಸಿನಕಾಯಿ – ೪
  • ಬೆಳ್ಳುಳ್ಳಿ ಎಸಳು – ೪ ರಿಂದ ೫
  • ಶುಂಠಿ – ೧ ಸಣ್ಣ ತುಂಡು
  • ಜೀರಿಗೆ ಪುಡಿ ಅಥವಾ ಆಮ್‌ಚೂರ್ ಪುಡಿ – ೨ ಚಮಚ
  • ಕಪ್ಪು ಉಪ್ಪು (ಬ್ಲಾಕ್ ಸಾಲ್ಟ್) – ೧ ಚಮಚ
  • ಬಿಳಿ ಉಪ್ಪು – ರುಚಿಗೆ ತಕ್ಕಷ್ಟು
  • ನೀರು – ಅಗತ್ಯವಿರುವಷ್ಟು

ಮಾಡುವ ವಿಧಾನ ಮೊದಲಿಗೆ ಹಸಿ ಮಾವಿನಕಾಯಿಯ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಹೆಚ್ಚಿದ ಮಾವಿನಕಾಯಿ ತುಂಡುಗಳು, ತೊಳೆದ ಪುದೀನಾ ಎಲೆಗಳು, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಕಪ್ಪು ಉಪ್ಪು, ಬಿಳಿ ಉಪ್ಪು ಮತ್ತು ಆಮ್‌ಚೂರ್ ಪುಡಿಯನ್ನು ಹಾಕಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ರುಚಿಕರವಾದ ಮಾವಿನಕಾಯಿ ಪುದೀನಾ ಚಟ್ನಿ ಸಿದ್ಧವಾಗಿದೆ. ಇದನ್ನು ಒಂದು ಬೌಲ್‌ಗೆ ತೆಗೆದುಕೊಂಡು ಫ್ರಿಡ್ಜ್‌ನಲ್ಲಿ ಇಟ್ಟು, ತಂಪಾದ ನಂತರ ಊಟದ ಜೊತೆಗೆ ಬಡಿಸಿ. ಈ ಚಟ್ನಿಯನ್ನು ಕೇವಲ ಅನ್ನದ ಜೊತೆ ಮಾತ್ರವಲ್ಲದೆ, ಬೇಸಿಗೆಯ ತಂಪು ಪಾನೀಯಗಳ ತಯಾರಿಕೆಯಲ್ಲೂ ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular