HomeKarnatakaBREAKING NEWS: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು: ರೆಸಾರ್ಟ್ ಮಾಲೀಕ ಸೇರಿ ಇಬ್ಬರು ಪೊಲೀಸ್...

BREAKING NEWS: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು: ರೆಸಾರ್ಟ್ ಮಾಲೀಕ ಸೇರಿ ಇಬ್ಬರು ಪೊಲೀಸ್ ವಶಕ್ಕೆ

ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿ ಇಬ್ಬರನ್ನು ಮಂಗಳೂರಿನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಉಚ್ಚಿಲ ಬಳಿ ಸಾಯಿರಾಂ ವಾಝ್ಕೋ ಬೀಚ್ ರೆಸಾರ್ಟ್ ನಲ್ಲಿ ಇಂದು ಬೆಳಿಗ್ಗೆ ಈಜುಕೊಳದಲ್ಲಿ ಮುಳುಗಿ ಮೈಸೂರು ಮೂಲದ ಮೂವರು ಯುವತಿಯರು ಮೃತಪಟ್ಟಿದ್ದರು. ನಿತಿಶಾ ಎಂ.ಡಿ (21), ಪಾರ್ವತಿ ಎನ್ (20) ಕೀರ್ತನಾ (21) ಮೃತ ಯುವತಿಯರು.

ಈ ಪ್ರಕರಣಕ್ಕೆ ಸಬಂಧಿಸಿದಂತೆ ಉಳ್ಳಾಲ ಪೊಲೀಸರು ರೆಸಾರ್ಟ್ ಮಾಲೀಕ ಮನೋಹರ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ತನಿಖೆ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ರೆಸಾರ್ಟ್ ಪರವಾನಿಗೆ ರದ್ದು ಮಾಡಲಾಗಿದ್ದು, ಸೀಲ್ ಡೌನ್ ಮಾಡಿರುವುದಾಗಿ ಮಂಗಳೂರು ನಗರ ಎಸಿ ಹರ್ಷವರ್ಧನ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular