HomeKarnatakaವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್; ಖತರ್ನಾಕ್ ಆರೋಪಿಗಳು ಅರೆಸ್ಟ್

ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್; ಖತರ್ನಾಕ್ ಆರೋಪಿಗಳು ಅರೆಸ್ಟ್

ಮಂಗಳೂರು: ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮುರ್ಜಾಪುರ ಮೂಲದ ಅಭಯ್ ರಾಜ್ (26) ಹಾಗೂ ಹರಿಶಂಕರ್ ಗಿರಿ (25) ಬಂಧಿತರು. ಸೆ.28ರಂದು ಮಂಗಳೂರು-ಸುರತ್ಕಲ್ ಮಾರ್ಗದ ರೈಲಿನಲ್ಲಿ ಸಂಭವಿಸಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ರೈಲ್ವೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕಳ್ಳರ ಕೈಚಳಕ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಪಿಯಿಂದ ವಿಮಾನದಲ್ಲಿ ಆಗಮಿಸುತ್ತಿದ್ದ ಕಳ್ಳರು ರಾತ್ರಿ ವೇಳೆ ಕೊಂಕಣ ರೈಲ್ವೆ, ಕೇರಳ, ಕರ್ನಾಟಕ ಭಾಗದ ರೈಲುಗಳಲ್ಲಿ ಪ್ರಯಾಣಿಕರ ಚಿನ್ನಾಭರಣ, ಹಣ ದೋಚಿ ಪರಾರಿಯಾಗುತ್ತಿದ್ದರು. ವಿಮಾನದಲ್ಲಿಯೇ ಬಂದು ವಿಮಾನದಲ್ಲಿಯೇ ಹಿಂತಿರುಗುತ್ತಿದ್ದರು ಈ ಹೈಟೆಕ್ ಕಳ್ಳರು. ಸಧ್ಯ ಬಂಧಿತ ಆರೋಪಿಗಳಿಂದ 125 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular