HomeLatest Newsಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳಿಗೆ ಬಿಗ್ ಶಾಕ್: ಬುದ್ಧಿಕಲಿಸಿದ ಪೊಲೀಸರು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳಿಗೆ ಬಿಗ್ ಶಾಕ್: ಬುದ್ಧಿಕಲಿಸಿದ ಪೊಲೀಸರು!

ಮಂಗಳೂರು: ಎಲ್ಲೋ ಕುಳಿತು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಿ ಹುಚ್ಚಾಟ ಮೆರೆಯುತ್ತಿದ್ದ ಕಿಡಿಗೇಡಿಗಳಿಗೆ ಮಂಗಲೂರು ಪೊಲೀಸರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ವಿದೇಶಗಳಲ್ಲಿ ಕುಳಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯ ಬಿತ್ತಲು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಪೋಸ್ಟ್ ಗಳನ್ನು ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಾಲಾಗಿ ನಿಲ್ಲಿಸಿ ಅವರಿಂದ ಕೈಮುಗಿದು ತಪ್ಪಾಯಿತು ಇನ್ಮುಂದೆ ಇಂತಹ ಕೃತ್ಯ ಮಾಡಲ್ಲ ಎಂದು ಬೇಡಿಕೊಳ್ಳುವಂತೆ ಮಾಡಿದ್ದಾರೆ. ಉಡುಪಿಯ ಮೊಹಮ್ಮದ್ ಅಸ್ಲಾಂ, ಸುರತ್ಕಲ್ ನ ಇಡ್ಯಾ ಗ್ರಾಮದ ಚೇತನ್, ಚೇಳಾರ್ ನ ನಿತಿನ್ ಅಡಪ, ಫರಂಗಿಪೇಟೆ ಅರ್ಕುಳ ನಿವಾಸಿ ರಿಯಾಝ್, ಹಳೆಯಂಗಡಿ ನಿವಾಸಿ ಗುರುಪ್ರಸಾದ್ ಬಂಧಿತ ಆರೋಪಿಗಳು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಪೋಸ್ಟ್ ಮಾಡುತ್ತಿದ್ದವರನ್ನೇ ಬಂಧಿಸಿ ಅವರನ್ನು ಟ್ರೋಲ್ ಮಾಡುವ ಮೂಲಕ ಪೊಲೀಸರು ಹೊಸ ಪ್ರಯೋಗ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಮು ವೈಷಮ್ಯದ ಕಿಡಿ ಹೊತ್ತಿಸುವ ಬಹುತೇಕರು ಗಲ್ಫ್ ರಾಷ್ಟ್ರದಲ್ಲಿದ್ದುಕೊಂಡು ಸೋಷಿಯಲ್ ಮೀಡಿಯಾಗಳ ಮೂಲಕವಾಗಿ ಕೃತ್ಯವೆಸಗುವವರಾಗಿದ್ದು, ಅಂತವರಿಗೂ ಮಂಗಳೂರು ಕಮಿಷನರ್ ಸುಧೀರ್ ರೆಡ್ದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular