HomeLatest NewsSHOCKING NEWS: ಬಕ್ರೀದ್ ಬಲಿದಾನಕ್ಕಾಗಿ ಕತ್ತು ಕೊಯ್ದುಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

SHOCKING NEWS: ಬಕ್ರೀದ್ ಬಲಿದಾನಕ್ಕಾಗಿ ಕತ್ತು ಕೊಯ್ದುಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

ಬಕ್ರೀದ್ ಹಬ್ಬದಂದು ವ್ಯಕ್ತಿಯೊಬ್ಬ ಬಲಿದಾನ ಎಂದು ತನ್ನ ಕತ್ತು ಕೊಯ್ದುಕೊಂಡು ದೇಹತ್ಯಾಗ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲೆಯಲ್ಲಿ ನಡೆದಿದೆ.

ಇಶ್ ಮೊಹಮ್ಮದ್ (60) ಮೃತ ವ್ಯಕ್ತಿ. ಶನಿವಾರ ಬೆಳಿಗ್ಗೆ ನಮಾಜ್ ಪ್ರಾಥನೆ ಸಲ್ಲಿಸಿದ ಬಳಿಕ ತನ್ನ ಸೋಳಿಕೊಂಡಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಗೋರಖ್ ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕತ್ತು ಸೀಳಿಕೊಳ್ಳುವ ಮೊದಲು ಮೊಹಮ್ಮದ್ ಒಂದು ಪತ್ರ ಬರೆದಿಟ್ಟಿದ್ದು, ‘ಜನರು ಮೇಕೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನಂತರ ಅವುಗಳನ್ನು ಬಲಿ ನೀಡುತ್ತಾರೆ. ಅವುಗಳು ಸಹ ನಮ್ಮಂತೆ ಜೀವಿಗಳು. ಅಲ್ಲಾಹನ ಹೆಸರಿನಲ್ಲಿ ನನ್ನನ್ನು ತ್ಯಾಗ ಮಾಡುತ್ತಿದ್ದೇನೆ. ನನ್ನನ್ನು ಯಾರೂ ಕೊಂದಿಲ್ಲ. ನನ್ನ ಸಾವಿನ ಬಗ್ಗೆ ಯಾರೂ ಭಯಪಡಬೇಡಿ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಕ್ರೀದ್ ಹಬ್ಬದ ಒಂದು ದಿನ ಮೊದಲು ಮೊಹಮ್ಮದ್ ಅಂಬೇಡ್ಕರ್ ನಗರದಲ್ಲಿರುವ ಕಿಚೌಚಾ ಶರೀಫ್ ನಲ್ಲಿರುವ ಸುಲ್ತಾನ್ ಸೈಯದ್ ಮಕ್ದೂಮ್ ಅಶ್ರಫ್ ಷಾ ಅವರ ಮಜಾರ್ (ಸಮಾಧಿ)ಗೆ ಭೇಟಿ ನೀಡಿ ಬಂದಿದ್ದರು ಎಂದು ಅವರ ಪತ್ನಿ ಹಜ್ರಾ ಖಾತೂನ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular