HomeKarnatakaನಾಲ್ಕು ದಶಕಗಳ ಕಾಲ ಕನ್ನಡಿಗರ ಅಚ್ಚುಮೆಚ್ಚಾಗಿದ್ದ 'ಮಂಗಳ'..... ಕೊನೇ ಸಂಚಿಕೆ ಪ್ರಕಟಿಸಿ ಭಾವನಾತ್ಮಕ ವಿದಾಯ ಹೇಳಿದ...

ನಾಲ್ಕು ದಶಕಗಳ ಕಾಲ ಕನ್ನಡಿಗರ ಅಚ್ಚುಮೆಚ್ಚಾಗಿದ್ದ ‘ಮಂಗಳ’….. ಕೊನೇ ಸಂಚಿಕೆ ಪ್ರಕಟಿಸಿ ಭಾವನಾತ್ಮಕ ವಿದಾಯ ಹೇಳಿದ ವಾರಪತ್ರಿಕೆ…..

ಕರಾವಳಿ: ನಾಲ್ಕು ದಶಕಗಳಿಂದ ಕನ್ನಡಿಗರ ಮನೆಮಾತಾಗಿದ್ದ ಜನಪ್ರಿಯ ವಾರಪತ್ರಿಕೆ ’ಮಂಗಳ’ ತನ್ನ ಕೊನೇ ಸಂಚಿಕೆಯನ್ನು ಪ್ರಕಟಿಸಿದೆ. 40 ವರ್ಷಗಳಿಂದ ಕರುನಾಡಿನಲ್ಲಿ ಅದರಲ್ಲಿಯೂ ಕರಾವಳಿ ಭಾಗದಲ್ಲಿ ಅಚ್ಚುಮೆಚ್ಚಾಗಿದ್ದ ವಾರ ಪತ್ರಿಕೆ ಮಂಗಳ. ಇದೀಗ ಏಕಾಏಕಿ ಈ ವಾರಪತ್ರಿಕೆ ತನ್ನ ಯಾನ ನಿಲ್ಲಿಸುವ ಮೂಲಕ ಓದುಗರಿಗೆ ನಿರಾಸೆ ಮೂಡಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳ ವಾರಪತ್ರಿಕೆಗೆ ಅತ್ಯದಿಕ ಓದುಗರು ಇದ್ದರು. ಮಧ್ಯಮ ವರ್ಗದ ಜನರ ಅಭಿರುಚಿಗೆ ತಕ್ಕಂತೆ ಪತ್ರಿಕೆ ರೂಪುಗೊಂಡಿತ್ತು. ಆದರೆ ಈಗ ಅನಿವಾರ್ಯ ಕಾರಣಗಳಿಂದಾಗಿ ಮಂಗಳ ವಾರಪತ್ರಿಕೆ ಮುದ್ರಣ ನಿಲ್ಲುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬದಲಾದ ಕಾಲಘಟ್ಟ, ಮುದ್ರಣ ಮಾಧ್ಯಮಗಳ ಓದುಗರ ಕೊರತೆ, ಆರ್ಥಿಕ ಸಂಕಷ್ಟ ಮೊದಲಾದ ಕಾರಣಗಳಿಂದಾಗಿ ಮಂಗಳ ವಾರಪತ್ರಿಕೆ ತನ್ನ ಸಂಚಿಕೆಯನ್ನು ನಿಲ್ಲಿಸುತ್ತಿದೆ. ಇದು ಅನಿವಾರ್ಯದ ನೋವು…ಆದರೂ ಈ ಕ್ಷಣದ ತಲ್ಲಣಗಳಿಗೆ ಒಡ್ಡಿಕೊಂಡೇ ಮುಂದಡಿ ಇಡಬೇಕಾದ ಪರಿಸ್ಥಿತಿ. ಮಂಗಳದ ಓದುಗರಪಾಲಿಗೆ ಇದು ಅನಿರೀಕ್ಷಿತವಾದರೂ ನಮ್ಮ ಪಾಲಿಗೆ ನಿರೀಕ್ಷಿತವೇ.

ನಿರೀಕ್ಷಿತವಾದ್ದರಿಂದ ನಿರ್ಲಿಪ್ತತೆಯೂ ಜತೆಗಿರುತ್ತದೆ ಎಂದು ಎಷ್ಟೋ ಸಲ ಅಂದುಕೊಂಡದ್ದಿದೆಯಾದರೂ ಒಮ್ಮೊಮ್ಮೆ ಎದೆ ಭಾರವಾಗುವುದಿದೆ ಎಂದು ಮಂಗಳ ವಾರಪತ್ರಿಕೆ ಸಂಪಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular