ಮಂಡ್ಯ: ಶಾಲೆಯಲ್ಲಿದ್ದಾಗಲೇ ಬಾಲಕನಿಗೆ ಹೃದಯಘಾತವಾಗಿದೆ. ಮಂಡ್ಯ ಜಿಲ್ಲೆಯ ಸೋಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಹೃದಯಾಘಾತದಿಂದ ಬಾಲಕ ವೀರಮಣಿ ಮೃತಪಟ್ಟಿದ್ದಾನೆ. ಬಿಸಿಯುಟ ಸೇವಿಸುತ್ತಿದ್ದಾಗ ಬಾಲಕ ವೀರಮಣಿ ಕುಸಿದು ಬಿದ್ದಿದ್ದು, ಕೂಡಲೇ ಆತನನ್ನು ಮದ್ದೂರು ಆಸ್ಪತ್ರೆಗೆ ನಂತರ ಮಂಡ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಈ ವೇಳೆಗಾಗಲೇ ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸೋಮನಹಳ್ಳಿ ಗ್ರಾಮದ ಶಾಲೆಯಲ್ಲಿ ಘಟನೆ ನಡೆದಿದೆ. ಬಾಲಕ ವೀರಮಣಿ ಬಿಸಿಯೂಟ ಸೇವಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

