ಮಂಡ್ಯ: ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದು, ಅಣ್ಣನಿಂದಲೇ ತಮ್ಮ ಹತ್ಯೆಯಾಗಿರುವ ಘೋರ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಕುವಿನಿಂದ ಇರಿದು ಅಣ್ಣನೇ ತಮ್ಮನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಯೋಗೇಶ್ (35) ಕೊಲೆಯಾದ ವ್ಯಕ್ತಿ. ಲಿಂಗರಾಜು ತಮ್ಮನನ್ನೇ ಕೊಲೆಗೈದ ಆರೋಪಿ. ಲಿಂಗರಾಜುಗೆ ಆತನ ಮಕ್ಕಳಾದ ಭರತ್, ದರ್ಶನ್ ಎಂಬುವವರು ಸಾಥ್ ನೀಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಂಡ್ಯದ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

