HomeKarnatakaBREAKING NEWS: ಪ್ರೀತಿಸುವಂತೆ ಬಾಲಕರ ಒತ್ತಾಯ: ಕಿರುಕುಳಕ್ಕೆ ನೊಂದು ಬಾಲಕಿ ಆತ್ಮಹತ್ಯೆ

BREAKING NEWS: ಪ್ರೀತಿಸುವಂತೆ ಬಾಲಕರ ಒತ್ತಾಯ: ಕಿರುಕುಳಕ್ಕೆ ನೊಂದು ಬಾಲಕಿ ಆತ್ಮಹತ್ಯೆ

ಮಂಡ್ಯ: ಪ್ರೀತಿಸುವಂತೆ ಒತ್ತಾಯಿಸಿ ಬಾಲಕರು ಗಲಾಟೆ ಮಾಡಿ ಕಿರುಕುಳ ನೀಡಿದ್ದಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ.

15 ವರ್ಷದ ಇಂಪನಾ ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ. ಹನಕೆರೆ ಗ್ರಾಮದ ಬಾಲಕರು ಯುವತಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಬಾಲಕರ ನಡುವೆ ಗಲಾಟೆಯಾಗಿ ಮಾತಿನ ಚಕಮಕಿ ಕೂಡ ನಡೆದಿತ್ತು.

ಗಲಾಟೆ, ಮಾತಿನ ಚಕಮಕಿ ಆಡಿಯೋವನ್ನು ಬಾಲಕಿ ತಾಯಿಗೆ ವಾಟ್ಸಪ್ ಮಾಡಿದ್ದರು. ಇದರಿಂದ ಮನನೊಂದ ಇಂಪನಾ, ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಬಾಲಕರು ಗ್ರಾಮದಿಂದ ಎಸ್ಕೇಪ್ ಆಗಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular