HomeEntertainment'ಮನದರಸಿ' ಚಿತ್ರದ ಎರಡನೇ ಟ್ರೈಲರ್ ರಿಲೀಸ್

‘ಮನದರಸಿ’ ಚಿತ್ರದ ಎರಡನೇ ಟ್ರೈಲರ್ ರಿಲೀಸ್

ಮಾರ್ಚ್ ಎಂಟರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಟಿ ಎಸ್ ಕೃಷ್ಣಮೂರ್ತಿ ನಿರ್ದೇಶನದ ‘ಮನದರಸಿ’ ಚಿತ್ರದ ಮತ್ತೊಂದು ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ರೂಪೇಶ್ ಜಿ ರಾಜ್ ಮತ್ತು ಸುಹಾನ ಎಸ್ ಗೌಡ ಮುಖ್ಯ ಭೂಮಿಕೆಯಲ್ಲಿದ್ದು,  ಪೂಜಾ ಅಂಜನಪ್ಪ, ಮಜಾ ಭಾರತ ಬಸವರಾಜ್, ಕೆಜಿಎಫ್ ಕೃಷ್ಣಪ್ಪ, ಉಳಿದ ಪಾತ್ರವರ್ಗದಲ್ಲಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದು, ನಾಗರಾಜ್ ಬಿ ಅರಸೂರ ಸಂಕಲನ, ವೇಣು ಮೂರ್ತಿ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ಪಿಕೆಆರ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular