HomeCrimeBIG NEWS: ಸರ್ಕಾರಿ ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳ 70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿ...

BIG NEWS: ಸರ್ಕಾರಿ ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳ 70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿ ಅರೆಸ್ಟ್

70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿಯನ್ನ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 24 ರಾಜ್ಯಗಳು ಮತ್ತು ಎಂಟು ಮಹಾನಗರಗಳಿಗೆ ಸೇರಿದ 66.9 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಗೌಪ್ಯ ಡೇಟಾವನ್ನು ಕದಿಯುವುದು, ಹಿಡಿದಿಟ್ಟುಕೊಳ್ಳುವುದು ಮತ್ತು ಮಾರಾಟ ಮಾಡುವಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿನಯ್ ಭಾರದ್ವಾಜ್ ಎಡ್ಯೂ-ಟೆಕ್ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ಹೊಂದಿದ್ದು, ಜಿಎಸ್‌ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಪ್ರಮುಖ ಇಕೋ-ಮರ್ಸ್ ಪೋರ್ಟಲ್‌ಗಳಂತಹ ಪ್ರಮುಖ ಸಂಸ್ಥೆಗಳ ಗ್ರಾಹಕರ ಡೇಟಾವನ್ನು ಹೊಂದಿದ್ದ ಎಂದು ಪೊಲೀಸರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಶುಕ್ರವಾರ ಬಂಧಿಸಲಾದ ಆರೋಪಿಯು 104 ವಿಭಾಗಗಳಲ್ಲಿ ನಿರ್ವಹಿಸಲಾದ ಸುಮಾರು 66.9 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಬಳಿಯಿರುವ ಕೆಲವು ಪ್ರಮುಖ ದತ್ತಾಂಶಗಳಲ್ಲಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಡೇಟಾ, ಹಿರಿಯ ನಾಗರಿಕರು, ದೆಹಲಿ ವಿದ್ಯುತ್ ಗ್ರಾಹಕರು, ಡಿ-ಮ್ಯಾಟ್ ಖಾತೆದಾರರು, ವಿವಿಧ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು, NEET ವಿದ್ಯಾರ್ಥಿಗಳು, ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರ ಮಾಹಿತಿ ಇದೆ ಎಂದು ಪ್ರಕಟಣೆ ತಿಳಿಸಿದೆ.

ಆರೋಪಿಯು ಹರಿಯಾಣದ ಫರೀದಾಬಾದ್‌ನಲ್ಲಿರುವ “InspireWebz” ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಮತ್ತು ಕ್ಲೌಡ್ ಡ್ರೈವ್ ಲಿಂಕ್‌ಗಳ ಮೂಲಕ ಗ್ರಾಹಕರಿಗೆ ಡೇಟಾಬೇಸ್ ಮಾರಾಟ ಮಾಡುತ್ತಿದ್ದ.

ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳು ಮತ್ತು ಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ 135 ವಿಭಾಗಗಳ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular