HomeIndiaಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ದುಡಿದು ತಿನ್ನಲು ನೆರವು; ‌ʼಹೃದಯವಂತʼ ವ್ಯಕ್ತಿಯ ವಿಡಿಯೋ ವೈರಲ್

ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ದುಡಿದು ತಿನ್ನಲು ನೆರವು; ‌ʼಹೃದಯವಂತʼ ವ್ಯಕ್ತಿಯ ವಿಡಿಯೋ ವೈರಲ್

ಹೊಟ್ಟೆ, ಬಟ್ಟೆ ಹಾಗೂ ಮಕ್ಕಳು, ಕುಟುಂಬಸ್ಥರಿಗಾಗಿ ಕೆಲವರು ಭಿಕ್ಷೆ ಬೇಡುತ್ತಾರೆ. ಅವರಿಗೆ ಯಾವುದೇ ಕೆಲಸ ಮಾಡಲು ಅಥವಾ ವ್ಯವಹಾರ ನಡೆಸಲು ಹಣವಿರೋದಿಲ್ಲ. ಭಿಕ್ಷೆ ಬೇಡೋದ್ರಿಂದ ಪ್ರತಿ ದಿನ ಹೊಟ್ಟೆ ತುಂಬುತ್ತೆ ಎನ್ನಲೂ ಸಾಧ್ಯವಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್‌ ಆಗಿದೆ. ಭಿಕ್ಷೆ ಬೇಡುವ ಮಹಿಳೆ ಗೊಂಬೆಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾಳೆ. ಅದು ಹೇಗಾಯ್ತು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

seenu.malik.365 ಹೆಸರಿನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆರಂಭದಲ್ಲಿ ತಾಯಿ, ಮಗನನ್ನು ನೋಡ್ಬಹುದು. ತಾಯಿ ಸಿಗ್ನಲ್‌ ಬೀಳ್ತಿದ್ದಂತೆ ಭಿಕ್ಷೆ ಕೇಳ್ತಿದ್ದಾಳೆ. ಆದ್ರೆ ಯಾರೂ ಭಿಕ್ಷೆ ನೀಡೋದಿಲ್ಲ. ಈ ಮಧ್ಯೆ ಮಗು ರಸ್ತೆ ದಾಟುತ್ತಿದ್ದು, ಆತನನ್ನು ಎತ್ತಿಕೊಳ್ಳುವ ವ್ಯಕ್ತಿಯೊಬ್ಬ, ಮಹಿಳೆಗೆ ಅಲ್ಲೇ ನಿಲ್ಲಲು ಹೇಳಿ ಕಾರ್‌ ಬಳಿ ಹೋಗ್ತಾನೆ. ಕಾರಿನಿಂದ ಒಂದಿಷ್ಟು ಗೊಂಬೆಗಳನ್ನು ತಂದು, ಮಾರಾಟಕ್ಕೆ ವ್ಯವಸ್ಥೆ ಮಾಡಿ, ಮಹಿಳೆ ಕಣ್ಣು ಕಟ್ಟಿ, ಆಕೆಯನ್ನು ಆ ಸ್ಥಳಕ್ಕೆ ಕರೆದೊಯ್ದು ಸರ್ಪ್ರೈಸ್‌ ನೀಡ್ತಾನೆ.

ಗೊಂಬೆಗಳನ್ನು ನೋಡಿದ ಮಹಿಳೆ ಖುಷಿಯಾಗ್ತಾಳೆ. ಈ ಮಧ್ಯೆ ವ್ಯಕ್ತಿಯೊಬ್ಬ ಆಕೆ ಮಾರಾಟಕ್ಕಿಟ್ಟ ಗೊಂಬೆ ಖರೀದಿ ಮಾಡೋದನ್ನು ನೋಡ್ಬಹುದು. ಇದ್ರಿಂದ ಮಗು ಹಾಗೂ ತಾಯಿ ಇಬ್ಬರು ಖುಷಿಯಾಗ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಒಳ್ಳೆಯ ಕೆಲಸ ಎಂದು ಬಹುತೇಕರು ಕಮೆಂಟ್‌ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular